Select Your Language

Notifications

webdunia
webdunia
webdunia
webdunia

ವಿಸ್ಮಯಕಾರಿ ಘಟನೆ! ಹಾಲು, ನೀರು ಕುಡಿಯುತ್ತಿರುವ ಕಲ್ಲಿನ ನಂದಿ ವಿಗ್ರಹ

ವಿಸ್ಮಯಕಾರಿ ಘಟನೆ! ಹಾಲು, ನೀರು ಕುಡಿಯುತ್ತಿರುವ ಕಲ್ಲಿನ ನಂದಿ ವಿಗ್ರಹ
ಬೀದರ್ , ಸೋಮವಾರ, 31 ಜುಲೈ 2023 (08:35 IST)
ಬೀದರ್ : ಕಲ್ಲಿನ ನಂದಿ ವಿಗ್ರಹ ಹಾಲು ಮತ್ತು ನೀರು ಕುಡಿಯುತ್ತಿರುವ ಸುದ್ದಿ ಹರಡಿದ್ದು, ವಿಸ್ಮಯಕಾರಿ ಘಟನೆ ಕಣ್ತುಂಬಿಕೊಳ್ಳಲು ಜನರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ.
 
ಗಡಿ ಜಿಲ್ಲೆ ಬೀದರ್ನಲ್ಲಿರುವ ದೇವಸ್ಥಾನದಲ್ಲಿ ವಿಸ್ಮಯವನ್ನು ನೋಡಲು ಭಕ್ತರ ದಂಡೇ ಆಗಮಿಸುತ್ತಿದೆ. ಜಿಲ್ಲೆಯ ಹಲವು ದೇವಸ್ಥಾನಗಳು ಈ ವಿಸ್ಮಯಕಾರಿ ಘಟನೆಗೆ ಸಾಕ್ಷಿಯಾಗಿದೆ. ಬೀದರ್ ತಾಲೂಕಿನ ಧೂಮಸಾಪೂರ್, ಮರಕುಂದ, ಕಪಲಾಪೂರ್ ಹಾಗೂ ಚಿಟ್ಟಗುಪ್ಪ ತಾಲೂಕಿನ ನಿರ್ಣಾ, ಮಂಗಲಗಿ ಬಸವಕಲ್ಯಾಣ ತಾಲೂಕಿನಲ್ಲಿ ನಾರಾಯಣಪೂರ್ ಸೇರಿದಂತೆ ಜಿಲ್ಲೆಯ ಹಲವೆಡೆ ವಿಸ್ಮಯಕಾರಿ ಘಟನೆಯಾಗುತ್ತಿದೆ.

ಕಲ್ಲಿನ ನಂದಿ ವಿಗ್ರಹ ಹಾಲು ಮತ್ತು ನೀರು ಕುಡಿಯುತ್ತೆ ಎನ್ನುವ ವದಂತಿ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನದ ಕಡೆ ಮಹಿಳಾ ಭಕ್ತರು ಮುಖ ಮಾಡುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಹರಿಕೋಟಾದಿಂದ ಸಿಂಗಾಪುರದ 7 ಉಪಗ್ರಹಗಳ ಉಡಾವಣೆ