ಅಮರನಾಥ ಯಾತ್ರೆ ಪುನರಾರಂಭ

Webdunia
ಸೋಮವಾರ, 11 ಜುಲೈ 2022 (20:46 IST)
ಜಮ್ಮುವಿನ ಭಗವತಿ ನಗರದಲ್ಲಿರುವ ಯಾತ್ರಿ ನಿವಾಸ ಬೇಸ್ ಕ್ಯಾಂಪ್ ನಿಂದ ಅಮರನಾಥ ಯಾತ್ರೆ ಪುನರಾರಂಭಗೊಂಡಿದೆ. ಶುಕ್ರವಾರ ಸಂಜೆ ಅಮರನಾಥ ಗುಹೆ ಬಳಿ ಭಾರೀ ವರ್ಷಧಾರೆಯಿಂದಾಗಿ ತಾತ್ಕಾಲಿಕವಾಗಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಮಳೆ ಆರ್ಭಟದಿಂದಾಗಿ ಉಂಟಾದ ಪ್ರವಾಹದಿಂದ 16 ಜನರು ಸಾವಿಗೀಡಾಗಿದ್ದರು. ಇದೇ ಸಂದರ್ಭದಲ್ಲಿ 40 ಮಂದಿ ಕಾಣೆಯಾಗಿದ್ದು, ಸುಮಾರು 50 ಮಂದಿ ಗಾಯಗೊಂಡಿದ್ದಾರೆ. ಅಮರನಾಥದಲ್ಲಿ ಈ ಅನಾಹುತ ಸಂಭವಿಸಿದ್ದರೂ ಯಾತ್ರಾರ್ಥಿಗಳ ಉತ್ಸಾಹ ಸ್ವಲ್ಪವೂ ಕಡಿಮೆಯಾಗಿಲ್ಲ.' ಬಂ ಬಂ ಭೋಲೆ' ಎಂಬ ಘೋಷಣೆಗಳೊಂದಿಗೆ ಭಕ್ತರಿಗಾಗಿ ಸರ್ಕಾರ ಸ್ಥಾಪಿಸಿರುವ ಬೇಸ್ ಕ್ಯಾಂಪ್​​​​ಗಳತ್ತ ದಾಪುಗಾಲು ಹಾಕುತ್ತಿದ್ದಾರೆ. 4,026 ಯಾತ್ರಾರ್ಥಿಗಳ 12ನೇ ಬ್ಯಾಚ್ 110 ವಾಹನಗಳ ಬೆಂಗಾವಲಿನೊಂದಿಗೆ ಶಿಬಿರದಿಂದ ರವಾನೆಯಾಗಿದ್ದಾರೆ. ಇನ್ನು 767 ಪುರುಷರು, 240 ಮಹಿಳೆಯರು ಮತ್ತು ಒಂಬತ್ತು ಮಕ್ಕಳು ಸೇರಿದಂತೆ ಒಟ್ಟು 1,016 ಪ್ರಯಾಣಿಕರು ಬೇಸ್ ಕ್ಯಾಂಪ್ ನಿಂದ 25 ಬಸ್ ಗಳು ಮತ್ತು 10 ಲಘು ಮೋಟಾರು ವಾಹನಗಳಲ್ಲಿ ಬಾಲ್ಟಾಲ್ ಮಾರ್ಗಕ್ಕೆ ತೆರಳಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಗ್ರಹಾರದಲ್ಲಿ ಅಕ್ರಮ ಹೆಚ್ಚು ಬೆನ್ನಲ್ಲೇ, ಖಡಕ್ ಪೊಲೀಸ್ ಅಧಿಕಾರಿ ಎಂಟ್ರಿ, ಕೈದಿಗಳಿಗೆ ನಡುಕ

ಷಡ್ಯಂತ್ರ ಬಯಲು ಬೆನ್ನಲ್ಲೇ ಮಹತ್ವದ ಪ್ರಕಟಣೆ ಹೊರಡಿಸಿದ ಧರ್ಮಸ್ಥಳ

ರೇಷ್ಮೆ ಬದಲು ಪಾಲಿಸ್ಟರ್ ಶಾಲು ತಿರುಪತಿ ದೇವಸ್ಥಾನದಲ್ಲಿ ಏನಿದು ಹಗರಣ

ಐಪಿಎಲ್ ಪಂದ್ಯವನ್ನು ಬೆಂಗಳೂರಿನಿಂದ ಹೊರಗೆ ಹೋಗಲು ಬಿಡುವುದಿಲ್ಲ: ಶಿವಕುಮಾರ್‌

ದ್ವೇಷ ಭಾಷಣ ಕಾರುವವರಿಗೆ ಮುಂದೈತೆ ಮಾರಿಹಬ್ಬ: ವಿಧಾನಸಭೆಯಲ್ಲಿ ಮಂಡನೆಯಾಯ್ತು ಪ್ರತಿಬಂಧಕ ಮಸೂದೆ

ಮುಂದಿನ ಸುದ್ದಿ
Show comments