Select Your Language

Notifications

webdunia
webdunia
webdunia
webdunia

ಅಚ್ಚರಿ ಎನಿಸಿದರೂ ಸತ್ಯ : 2 ತಿಂಗಳಲ್ಲಿ 9 ಬಾರಿ ಹಾವು ಕಡಿದ್ರೂ ಈ ಬಾಲಕನಿಗೆ ಏನು ಆಗಿಲ್ಲ!

ಅಚ್ಚರಿ ಎನಿಸಿದರೂ ಸತ್ಯ : 2 ತಿಂಗಳಲ್ಲಿ 9 ಬಾರಿ ಹಾವು ಕಡಿದ್ರೂ ಈ ಬಾಲಕನಿಗೆ ಏನು ಆಗಿಲ್ಲ!
ಕಲಬುರಗಿ , ಮಂಗಳವಾರ, 29 ಆಗಸ್ಟ್ 2023 (07:47 IST)
ಕಲಬುರಗಿ : ಹಾವು ಕಂಡ್ರೆ ಸಾಕು ಜನ ಮಾರುದ್ದ ಹೌಹಾರಿ ಓಡಿ ಹೋಗುತ್ತಾರೆ. ಅಂಥದ್ದರಲ್ಲಿ ಕಲಬುರಗಿಯ ಓರ್ವ ಬಾಲಕನಿಗೆ ಕಳೆದ ಎರಡು ತಿಂಗಳಲ್ಲಿಯೇ 9 ಬಾರಿ ಹಾವು ಕಚ್ಚಿದೆಯಂತೆ.

ಹೌದು. ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಹಳಕರ್ಟಿ ಗ್ರಾಮದ ನಿವಾಸಿ ಪ್ರಜ್ವಲ್ಗೆ ಜುಲೈ 3ರಂದು ಮನೆ ಅಂಗಳದಲ್ಲಿ ಆಟವಾಡುವಾಗ ಹಾವು ಕಚ್ಚಿದೆ. ಆಗ ಈ ಬಾಲಕನ ಪೋಷಕರು ಬೇವಿನ ಮರದ ಎಲೆ ಹಾಗೂ ಖಾರದ ಪುಡಿ ತಿನ್ನಿಸಿದ್ದಾರೆ. ಆಗ ಬಾಯಿಗೆ ಸಿಹಿ, ಖಾರ ಎರಡೂ ಹತ್ತುತ್ತಿಲ್ಲ ಅಂತಾ ಬಾಲಕ ಹೇಳಿದ್ದಾನೆ.

ಕೂಡಲೇ ಆತನನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ. ಅದಾದ ಬಳಿಕ ನಾಲ್ಕು-ಐದು ದಿನಗಳ ಮಧ್ಯೆದಲ್ಲಿ ಈ ಬಾಲಕನಿಗೆ ನಿರಂತರವಾಗಿ ಇಲ್ಲಿಯವರೆಗೆ ಒಟ್ಟು 9 ಬಾರಿ ಹಾವು ಕಡಿತವಾಗಿರೋದು ಬೆಳಕಿಗೆ ಬಂದಿದೆ.

ಸದ್ಯ ಇಲ್ಲಿಯವರೆಗೆ 9 ಬಾರಿ ಹಾವು ಕಚ್ಚಿರುವ ಗುರುತುಗಳು ಕೂಡ ಆತನ ಕಾಲಿನಲ್ಲಿದೆ. ಅದರಲ್ಲಿ 5 ಬಾರಿ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ರೆ, ಇನ್ನುಳಿದ 4 ಬಾರಿ ಸ್ಥಳೀಯ ನಾಟಿ ವೈದ್ಯರಿಂದ ಔಷಧಿಯನ್ನು ಪೋಷಕರು ಕೊಡಿಸಿದ್ದಾರೆ. ಆದರೆ ಇಲ್ಲಿಯವರೆಗೂ ಆ ಹಾವು ಪ್ರಜ್ವಲ್ ಬಿಟ್ಟು ಯಾರ ಕಣ್ಣಿಗೂ ಸಹ ಕಂಡಿಲ್ಲ. ಹೀಗಾಗಿ ಆತನ ಮನೆ ಸುತ್ತ ಹಾವು ಹುಡುಕುವುದೇ ಸದ್ಯ ನೆರೆಹೊರೆಯವರ ಕೆಲಸವಾಗಿದೆ.

 
ಪ್ರತಿ ಬಾರಿ ಈ ಬಾಲಕ ಒಬ್ಬನ ಮೇಲೆ ಮಾತ್ರ ಹಾವು ಕಚ್ಚಿರುವುದಾಗಿ ಹೇಳುತ್ತಿರುವುದು ಸಹ ಹಲವು ಅನುಮಾನಕ್ಕೂ ಸಹ ಎಡೆಮಾಡಿಕೊಟ್ಟಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಾದೇಶಿಕ ಪಕ್ಷ ಉಳಿಸಬೇಕು ಕಾರ್ಯಕರ್ತರಿಗೆ ಕರೆ ನೀಡಿದ ದೊಡ್ಡಗೌಡ್ರು..!