Select Your Language

Notifications

webdunia
webdunia
webdunia
webdunia

ಸಮಿಶ್ರ ಸರ್ಕಾರದ ಮೊದಲ‌ ಬಜೆಟ್: ನಿರೀಕ್ಷೆ ಅಪಾರ

ಸಮಿಶ್ರ ಸರ್ಕಾರದ ಮೊದಲ‌ ಬಜೆಟ್: ನಿರೀಕ್ಷೆ ಅಪಾರ
ಹುಬ್ಬಳ್ಳಿ , ಬುಧವಾರ, 4 ಜುಲೈ 2018 (17:16 IST)
ಸಮಿಶ್ರ ಸರ್ಕಾರದ ಮೊದಲ‌ ಬಜೆಟ್ ಮೇಲೆ ಮುಂಬೈ ಕರ್ನಾಟಕದ ಜನತೆ ಸಾಕಷ್ಟು‌ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನ ಹಲವು ಯೋಜನೆಗಳು ಇನ್ನು ಅನುಷ್ಠಾನಗೊಂಡಿಲ್ಲ. ಇದರ ಮಧ್ಯೆ ಸಮ್ಮಿಶ್ರ ಸರ್ಕಾರ ನಾಳೆ ಮಂಡಿಸಲಿರುವ ಬಜೆಟ್ ಮೇಲೆ ಮುಂಬೈ ಕರ್ನಾಟಕ ಜನತೆ ಬೆಟ್ಟದಷ್ಟು‌ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಮುಂಬೈ ಕರ್ನಾಟಕದ ಹೆಬ್ಬಾಗಿಲಾಗರುವ ಹುಬ್ಬಳ್ಳಿ -ಧಾರವಾಡದ ಬಗ್ಗೆ ಈ ಬಾರಿಯ ಬಜೆಟ್ ನಲ್ಲಿ ಬಂಪರ್ ಕೊಡುಗೆ ನೀಡುವ ನಿರೀಕ್ಷೆ ಇದೆ. ನೆನೆಗುದಿದೆ ಬಿದ್ದಿರುವ ಹುಬ್ಬಳ್ಳಿ ಅಂಕೋಲಾ ರೈಲು ಯೋಜನೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಸಂಭವಿದೆ. ನೀರಾವರಿ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ ಯೋಜನೆ ಯೋಜನೆಗೆ ಹೆಚ್ಚಿನ ಅನುದಾನ ಹಾಗೂ‌ ಮೇಲ್ದರ್ಜೆಗೇರಿಸುವ ನಿರೀಕ್ಷೆ ಹೊಂದಿದ್ದಾರೆ. ಉತ್ತರ ಕರ್ನಾಟಕ ಬಹುದಿನಗಳಿಂದ ಹೋರಾಟ ಮಾಡುತ್ತ ಬಂದಿರುವ ಮಹದಾಯಿ ಯೋಜನೆಗೆ ಈಗಲೇ ಅನುದಾನ‌ ಒದಗಿಸಬೇಕು. ಬೆಣ್ಣೆ ಹಳ್ಳದಲ್ಲಿ‌ ಉಂಟಾಗುವ ಪ್ರವಾಹ ತಡೆ ಹಾಗೂ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಂಡು ಬಜೆಟ್ ನಲ್ಲಿ ಅನುದಾನ ಮೀಸಲಿಡಬೇಕು ಎಂಬ ಬೇಡಿಕೆ ಬಹುದಿನಳಿಂದ ಕೇಳಿ ಬರುತ್ತಿದೆ. ಇದರ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪವಾಗುವ ನಿರೀಕ್ಷೆ ಇದೆ.

ಬೆಳಗಾವಿ ಗಡಿ ಭಾಗದಲ್ಲಿ ಕನ್ನಡ ಶಾಲೆಗಳ ಅಭಿವೃದ್ದಿಗಾಗಿ ಹಣ ಮೀಸಲಿಡಬೇಕು. ಮುಂಬೈ ಕರ್ನಾಟಕದಲ್ಲಿನ ನೂತನ ತಾಲೂಕುಗಳಿಗೆ ಮೂಲಭೂತ ಸೌಲಭ್ಯ ಹಾಗೂ ಸಿಬ್ಬಂದಿ ಕೊರತೆ ಇದ್ದು, ಬಜೆಟ್ ನಲ್ಲಿ ನೂತನ‌ ತಾಲೂಕುಗಳಿಗೆ ವಿಶೇಷ ಅನುದಾನ‌ ನೀಡುವ ನಿರೀಕ್ಷೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶಿಷ್ಟ ಪತ್ರಿಕಾ ದಿನಾಚರಣೆ