Webdunia - Bharat's app for daily news and videos

Install App

IAS ಅಧಿಕಾರಿ ವಿರುದ್ಧ ಲಂಚದ ಆರೋಪ

Webdunia
ಶುಕ್ರವಾರ, 24 ಫೆಬ್ರವರಿ 2023 (18:43 IST)
ತೋಟಗಾರಿಕೆ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿರೋ ಐಎಎಸ್ ಅಧಿಕಾರಿ ರಾಜೇಂದ್ರ ಕಟಾರಿ ವಿರುದ್ಧ ಲಕ್ಷ ಲಕ್ಷ ಹಣ ಲಂಚ ಬೇಡಿಕೆ ಇಟ್ಟಿರೋ ಗಂಭೀರ ಆರೋಪ ಕೇಳಿ ಬಂದಿದೆ.ವಿಜಯಪುರ ಜಿಲ್ಲೆಯಲ್ಲಿ ತೋಟಗಾರಿಕಾ ಕಂಪನಿ ನೊಂದಣಿಗಾಗಿ ಐದು ಲಕ್ಷಕ್ಕೂ ಹೆಚ್ಚು ಹಣ ಬೇಡಿಕೆ ಇಟ್ಟಿದ್ದಾರೆ ಅಂತಾ ಸುರೇಶ್ ಬೀರಾದರ್ ಎಂಬುವರು ಗಂಭೀರ ಆರೋಪ ಮಾಡಿದ್ದಾರೆ.. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದ ಅವರು ಎಲ್ಲವೂ ಕ್ಲಿಯರ್ ಆಗಿತ್ತು.. ಟೆಕ್ನಿಕಲಿ ಎಲ್ಲಾ ದಾಖಲೆಗಳು ಸರಿ ಇದ್ರೂ ಅಪ್ರೂವಲ್ ಮಾಡೋಕೆ ಲಕ್ಷಾಂತರ ರೂಪಾಯಿ ಹಣ ಕೇಳ್ತಿದ್ದಾರೆ ಅಂತಾ ಲೋಕಾಯುಕ್ತಕ್ಕೆ ದೂರು ನೀಡಿದ್ರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಅಧಿಕಾರಿಗಳು ಇಂದು ಎಮ್ ಎಸ್ ಬಿಲ್ಡಿಂಗ್ ಬಳಿ ಇರೋ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಚೇರಿ, ಮತ್ತು ಲಾಲ್ ಬಾಗ್ ನಲ್ಲಿರೋ ತೋಟಗಾರಿಕಾ ಇಲಾಖೆ ನಿರ್ದೇಶಕರು ಮತ್ತು ಜಂಟಿ ನಿರ್ದೇಶಕರ ಕಚೇರಿ ಸೇರಿ ಮೂರು ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ರು.

ಇನ್ನು ಕಳೆದ ಆರು ತಿಂಗಳಿಂದಲೂ ಆಟ ಆಡಿಸ್ತಿರೋ ಐಎಎಸ್ ಅಧಿಕಾರಿ ಕಟಾರಿ ಮತ್ತು ಇಲಾಖೆ ಅಧಿಕಾರಿಗಳು ಹಣ ಕೊಡೋವರ್ಗೂ ಕಂಪನಿಗೆ ಅಪ್ರೂವಲ್ ಮಾಡಲ್ಲ ಅಂತಿದ್ದಾರೆ ಅಂತಾ ನೇರವಾಗಿ ಸುರೇಶ್ ಗಂಭೀರ ಆರೋಪ ಮಾಡಿದ್ರು.. ಅಲ್ದೆ ಕಳೆದ ವಾರ ಫ್ಯಾಮಿಲಿ ಸಮೇತ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ರೂ ಕರುಣೆ ಬರಲಿಲ್ಲ. ಈಗಾಗಲೇ ಐದು ಕೋಟಿ ಇನ್ವೆಷ್ಟ್ ಮಾಡಿ ಕಂಪನಿ ಓಪನ್ ಮಾಡಿದ್ದೀನಿ. ಅಪ್ರೂವಲ್ ಮಾಡೋಕೆ ಈ ರೀತಿ ಲಕ್ಷ ಲಕ್ಷ ಹಣ ಕೇಳಿ ನಮಗೆ  ಮತ್ತಷ್ಟು ಕಷ್ಟ ಕೊಡ್ತಿದ್ದಾರೆ ಅಂತಾ ಸುರೇಶ್ ಬೇಸರ ವ್ಯಕ್ತಪಡಿಸಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments