ತೋಟಗಾರಿಕೆ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿರೋ ಐಎಎಸ್ ಅಧಿಕಾರಿ ರಾಜೇಂದ್ರ ಕಟಾರಿ ವಿರುದ್ಧ ಲಕ್ಷ ಲಕ್ಷ ಹಣ ಲಂಚ ಬೇಡಿಕೆ ಇಟ್ಟಿರೋ ಗಂಭೀರ ಆರೋಪ ಕೇಳಿ ಬಂದಿದೆ.ವಿಜಯಪುರ ಜಿಲ್ಲೆಯಲ್ಲಿ ತೋಟಗಾರಿಕಾ ಕಂಪನಿ ನೊಂದಣಿಗಾಗಿ ಐದು ಲಕ್ಷಕ್ಕೂ ಹೆಚ್ಚು ಹಣ ಬೇಡಿಕೆ ಇಟ್ಟಿದ್ದಾರೆ ಅಂತಾ ಸುರೇಶ್ ಬೀರಾದರ್ ಎಂಬುವರು ಗಂಭೀರ ಆರೋಪ ಮಾಡಿದ್ದಾರೆ.. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದ ಅವರು ಎಲ್ಲವೂ ಕ್ಲಿಯರ್ ಆಗಿತ್ತು.. ಟೆಕ್ನಿಕಲಿ ಎಲ್ಲಾ ದಾಖಲೆಗಳು ಸರಿ ಇದ್ರೂ ಅಪ್ರೂವಲ್ ಮಾಡೋಕೆ ಲಕ್ಷಾಂತರ ರೂಪಾಯಿ ಹಣ ಕೇಳ್ತಿದ್ದಾರೆ ಅಂತಾ ಲೋಕಾಯುಕ್ತಕ್ಕೆ ದೂರು ನೀಡಿದ್ರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಅಧಿಕಾರಿಗಳು ಇಂದು ಎಮ್ ಎಸ್ ಬಿಲ್ಡಿಂಗ್ ಬಳಿ ಇರೋ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಚೇರಿ, ಮತ್ತು ಲಾಲ್ ಬಾಗ್ ನಲ್ಲಿರೋ ತೋಟಗಾರಿಕಾ ಇಲಾಖೆ ನಿರ್ದೇಶಕರು ಮತ್ತು ಜಂಟಿ ನಿರ್ದೇಶಕರ ಕಚೇರಿ ಸೇರಿ ಮೂರು ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ರು.
ಇನ್ನು ಕಳೆದ ಆರು ತಿಂಗಳಿಂದಲೂ ಆಟ ಆಡಿಸ್ತಿರೋ ಐಎಎಸ್ ಅಧಿಕಾರಿ ಕಟಾರಿ ಮತ್ತು ಇಲಾಖೆ ಅಧಿಕಾರಿಗಳು ಹಣ ಕೊಡೋವರ್ಗೂ ಕಂಪನಿಗೆ ಅಪ್ರೂವಲ್ ಮಾಡಲ್ಲ ಅಂತಿದ್ದಾರೆ ಅಂತಾ ನೇರವಾಗಿ ಸುರೇಶ್ ಗಂಭೀರ ಆರೋಪ ಮಾಡಿದ್ರು.. ಅಲ್ದೆ ಕಳೆದ ವಾರ ಫ್ಯಾಮಿಲಿ ಸಮೇತ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ರೂ ಕರುಣೆ ಬರಲಿಲ್ಲ. ಈಗಾಗಲೇ ಐದು ಕೋಟಿ ಇನ್ವೆಷ್ಟ್ ಮಾಡಿ ಕಂಪನಿ ಓಪನ್ ಮಾಡಿದ್ದೀನಿ. ಅಪ್ರೂವಲ್ ಮಾಡೋಕೆ ಈ ರೀತಿ ಲಕ್ಷ ಲಕ್ಷ ಹಣ ಕೇಳಿ ನಮಗೆ ಮತ್ತಷ್ಟು ಕಷ್ಟ ಕೊಡ್ತಿದ್ದಾರೆ ಅಂತಾ ಸುರೇಶ್ ಬೇಸರ ವ್ಯಕ್ತಪಡಿಸಿದ್ರು.