ವಿಧಾನ ಸೌಧದಲ್ಲಿ 10 ಲಕ್ಷ ಹಣ ಸಿಕ್ಕಿರುವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು,ವಿಧಾನ ಸೌಧದ ಗೋಡೆಯಲಿರುವವರು ಕೂಡ ಬರೀ ಕಾಸು ಕಾಸು ಅಂತಾರೆ ಎಂದು ನಾನು ಮುಂಚೆಯೇ ಹೇಳಿದಿನಿ.ಕೆ.ಎಸ್.ಈಶ್ವರಪ್ಪ ರಾಜೀನಾಮೆ ವಿಚಾರ ಕೂಡ ಎಲ್ಲರಿಗೂ ಗೊತ್ತಿದೆ.ಎಲ್ಲಾ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿರೋದು ಗೊತ್ತಿದೆ.ಇವತ್ತು ವಿಧಾನಸೌಧ ಒಂದೇ ಅಲ್ಲ.ಯಾವುದೇ ಗ್ರಾಮ ಪಂಚಾಯತಿ ಮತ್ತು ಕಾರ್ಪೊರೇಷನ್ ಆಫೀಸ್ ನಲ್ಲಿ ದುಡ್ಡು ಇಲ್ಲದೇ ಏನು ನೀಡುತಿಲ್ಲ.ವಿಧಾನಸೌಧದ ಅಧಿಕಾರಿಗಳಿಗೂ ಹಣ ಕೊಡಬೇಕು.ಮಂತ್ರಿಗಳಿಗೂ ಕೊಡಬೇಕು ಅದಕ್ಕೆ ಹೀಗೆಲ್ಲ ಆಗ್ತಿದೆ.ದೇಶದಲ್ಲಿ ನಮ್ಮ ರಾಜ್ಯದ ಆಡಳಿತ ಭ್ರಷ್ಟ ಆಡಳಿತ ಎಂದು ಹೆಸರು ಬಂದಿದೆ.ಇಂತಹ ಪ್ರಕರಣ ಸರ್ಕಾರ ಮುಚ್ಚಿಹಾಕುತ್ತೆ.ಯಾವ ಇಡಿ ಗೂ ಕೊಡುವುದಿಲ್ಲ.ಮಂತ್ರಿಗಳ ಮೇಲೆ FIR ಆದ್ರೂ ಅದನ್ನು ಮುಚ್ಚಿ ಹಾಕ್ತಾರೆ.ಬೇರೆ ಅವ್ರಿಗೆ ಆದ್ರೆ ಚಾರ್ ಶೀಟ್ ಹಾಕೊದು.ಅರೆಸ್ಟ್ ಮಾಡೊದು ಮಾಡ್ತಾರೆ.ಹೌದಪ್ಪ...ಎಲ್ಲಾ ಸೆಟಲಮೇಂಟ್ ವಿಧಾನ ಸೌಧದಲ್ಲಿಯೇ ನಡೆಯುತ್ತೆ ಎಂದು ಡಿಕೆಶಿವಕುಮಾರ್ ಹೇಳಿದ್ರು.
ಇನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ರಾಜ್ಯಕ್ಕೆ ಬರುತ್ತಿರುವ ವಿಚಾರವಾಗಿ ಮೈಸೂರು ಹೈವೇ ಕ್ವಾಲಿಟಿ ಸರಿ ಇಲ್ಲ ಅನ್ನೊದು ಎಲ್ಲರಿಗೂ ಗೊತ್ತಿದೆ.ನನ್ನ ಮನೆಯ ಮುಂದಿನ ರಸ್ತೆಯೇ ನೋಡಿ ಹೇಗಿದೆ.ನನ್ನ ಮನೆಯ ಮುಂದಿನ ರಸ್ತೆಯೇ ಅಡ್ಡಾದಿಡ್ಡಿಯಾಗಿದೆ.ಇಂತಹದ್ರಲ್ಲಿ ನ್ಯಾಷನಲ್ ಹೈವೇ ಪರಿಸ್ಥಿತಿ ಏನು..?ಹೈವೇ ನಲ್ಲಿ ನೀರು ನಿಂತಿದ್ದು...ಆಕ್ಸಿಡೆಂಟ್ ಆಗಿ ಸತ್ತಿದ್ದು ಎಲ್ಲರೂ ನೋಡಿದ್ದಾರೆ.ಇದೊಂದು ಈ ಸರ್ಕಾರದ ಮುಖವಾಡ ಎಂದು ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.