Select Your Language

Notifications

webdunia
webdunia
webdunia
webdunia

ಶಾಸಕ ಕೆ ಜೆ ಜಾರ್ಜ್‌ ಅವರಿಂದ ಜನವರಿ 10 ರಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರ

ಶಾಸಕ ಕೆ ಜೆ ಜಾರ್ಜ್‌ ಅವರಿಂದ  ಜನವರಿ 10 ರಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರ
bangalore , ಭಾನುವಾರ, 9 ಜನವರಿ 2022 (20:06 IST)
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಎಲ್ಲಾ ಸರಕಾರಿ ಸ್ಮಾರ್ಟ್‌ ಆಗಲಿವೆ. ಹೌದು, ರಾಜ್ಯದಲ್ಲೆ ಪ್ರಪ್ರಥಮವಾಗಿ ಒಂದು ವಿಧಾನಸಭಾ ಕ್ಷೇತ್ರದ ಎಲ್ಲಾ ಸರಕಾರಿ ಶಾಲೆಗಳು ಸ್ಮಾರ್ಟ್‌ ಉಪಕರಣಗಳನ್ನು ಹೊಂದುವ ಹೆಗ್ಗಳಿಕೆಗೆ ಪಾತ್ರವಾಗಲಿವೆ. 
ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಕೆ ಜೆ ಜಾರ್ಜ್‌ ಅವರ ಕಾಳಜಿಯಿಂದಾಗಿ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಎಲ್ಲಾ ಸರಕಾರಿ ಸ್ಮಾರ್ಟ್‌ ಆಗಿವೆ. ಕೆ ಜೆ ಜಾರ್ಜ್‌ ಅವರು ತಮ್ಮ ಸಿಎಸ್‌ಆರ್‌ ನಿಧಿಯನ್ನು ಬಳಸಿಕೊಂಡು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎಲ್ಲಾ (28) ಸರಕಾರಿ ಶಾಲೆಗಳಿಗೂ ಸ್ಮಾರ್ಟ್‌ ಕ್ಲಾಸ್‌ ಉಪಕರಣಗಳನ್ನು ಒದಗಿಸಿದ್ದಾರೆ. ಜನವರಿ 10 ಸೋಮುವಾರದಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕರಾದ ಕೆ.ಜೆ ಜಾರ್ಜ್‌ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಉಪಕರಣಗಳನ್ನು ಹಸ್ತಾಂತರಿಸಲಿದ್ದಾರೆ. 
ನನ್ನ ಕ್ಷೇತ್ರದ ಸರಕಾರಿ ಶಾಲೆಗಳು ಹಾಗೂ ಅಂಗನವಾಡಿಗಳು ಯಾವುದೇ ಖಾಸಗಿ ಶಾಲೆಗಳಿಗೂ ಕಮ್ಮಿಯಿಲ್ಲದಂತೆ ಅತ್ಯುತ್ತಮ ಶಿಕ್ಷಣ ನೀಡುವಂತಾಗಬೇಕು. ಅಲ್ಲದೆ, ಕರೋನಾ ಸಂಕಷ್ಟದ ಕಾಲದಲ್ಲಿ ಆನ್‌ಲೈನ್‌ ಶಿಕ್ಷಣವೇ ಪ್ರಧಾನವಾಗಿದೆ. ಈ ಶಿಕ್ಷಣದಿಂದ ಸರಕಾರಿ ಶಾಲೆಯ ಮಕ್ಕಳು ವಂಚಿತರಾಗಬಾರದು. ಹಾಗೆಯೇ, ಹೊಸ ತಂತ್ರಜ್ಞಾನ ಬಳಸಿಕೊಂಡು ನೀಡಲಾಗುವ ಶಿಕ್ಷಣದಿಂದ ವಿದ್ಯಾರ್ಥಿಗಳು ಇನ್ನು ಚೆನ್ನಾಗಿ ವಿಷಯಗಳನ್ನು ಅರ್ಥೈಸಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಸರಕಾರಿ ಶಾಲೆಯ ಮಕ್ಕಳು ಸ್ಮಾರ್ಟ್‌ ಆದಂತಹ ಶಿಕ್ಷಣ ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದ ನನ್ನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 28 ಸರಕಾರಿ ಶಾಲೆಗಳಿಗೂ ಸ್ಮಾರ್ಟ್‌ ಶಿಕ್ಷಣ ನೀಡುವ ಉಪಕರಣಗಳನ್ನು ನೀಡಲಾಗುತ್ತಿದೆ. ನನ್ನ ಒಡೆತನದ ಕಂಪನಿಯ ಸಿಎಸ್‌ಆರ್‌ ನಿಧಿಯನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ ಎಂದು ಶಾಸಕರಾದ ಕೆ ಜೆ ಜಾರ್ಜ್‌ ತಿಳಿಸಿದರು.
ಜನವರಿ 10 ಸೋಮುವಾರದಂದು ಬಾಣಸವಾಡಿಯಲ್ಲಿರುವ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ನಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಈ ಉಪಕರಣಗಳನ್ನು ಹಸ್ತಾಂತರಿಸಲಾಗುತ್ತಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು, ನಾಳೆ ವಿದ್ಯುತ್ ವ್ಯತ್ಯಯ