Select Your Language

Notifications

webdunia
webdunia
webdunia
webdunia

ಆಕ್ರೋಶ್ ದಿವಸ್‌ಕ್ಕೆ ಬಂದೋರಿಗೆ ಹಳೆಯ ನೋಟು ಹಂಚಿದ ಕಾಂಗ್ರೆಸ್ ಮುಖಂಡರು

ಆಕ್ರೋಶ್ ದಿವಸ್‌ಕ್ಕೆ ಬಂದೋರಿಗೆ ಹಳೆಯ ನೋಟು ಹಂಚಿದ ಕಾಂಗ್ರೆಸ್ ಮುಖಂಡರು
ಕೋಲಾರ , ಸೋಮವಾರ, 28 ನವೆಂಬರ್ 2016 (15:43 IST)
ಅಕ್ರೋಶ್ ದಿವಸ್‌ ಪ್ರತಿಭಟನೆಗೆ ಬಂದೋರಿಗೆ ಶಾಸಕರ ಎದುರೆ ಕಾಂಗ್ರೆಸ್ ಕಾರ್ಯಕರ್ತರು ಹಣ ಹಂಚಿದ ಘಟನೆ ಕೋಲಾರದಲ್ಲಿ ವರದಿಯಾಗಿದೆ.
 
ಕಪ್ಪು ಹಣ ತಡೆಗಟ್ಟುವ ಉದ್ದೇಶದಿಂದ ದೇಶಾದ್ಯಂತ 500, 1000 ಮುಖಬೆಲೆಯ ನೋಟು ನಿಷೇಧ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ದಿಟ್ಟ ನಿರ್ಧಾರವನ್ನು ವಿರೋಧಿಸಿ ಇಂದು ಪ್ರತಿಪಕ್ಷಗಳ ಆಕ್ರೋಶ್ ದಿವಸ್‌ದ ಹೆಸರಲ್ಲಿ ಭಾರತ ಬಂದ್‌ಗೆ ಕರೆ ನೀಡಿದ್ದವು. ಆದರೆ, ಕೋಲಾರದಲ್ಲಿ ನಡೆದ ಆಕ್ರೋಶ್ ದಿವಸ್‌ದ ಪ್ರತಿಭಟನೆಯಲ್ಲಿ ಪಾಲ್ಗೊಂಡವರಿಗೆ ಶಾಸಕರ ಎದುರಿಗೆ ಹಳೆಯ 500 ಹಾಗೂ 1000 ರೂಪಾಯಿ ನೋಟುಗಳನ್ನು ಹಂಚಿರುವುದು ಬೆಳಕಿಗೆ ಬಂದಿದೆ.
 
ಕೋಲಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕರ ಎದುರೇ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗೆ ಬಂದೋರಿಗೆ ಹಳೆಯ ನೋಟುಗಳನ್ನು ಹಂಚಿಕೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
 
ಪ್ರತಿಭಟನೆಯಲ್ಲಿ ಭಾಗಿಯಾದವರಿಗೆ ಕಾಂಗ್ರೆಸ್ ಕಾರ್ಯಕರ್ತರು ಹಳೆಯ ನೋಟುಗಳನ್ನು ಹಂಚಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಹಣ ನೀಡಿ ಪ್ರತಿಭಟನೆಗೆ ಜನರನ್ನು ಕರೆತಂದರಾ? ಅಥವಾ ತಮ್ಮಲ್ಲಿರುವ ಕಪ್ಪು ಹಣವನ್ನೇ ಹಂಚಿಕೆ ಮಾಡಿದ್ರಾ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಸಂಸದ ಮಹೇಶ್ ಶರ್ಮಾ ಪುತ್ರಿಯ ವಿವಾಹ 2.5 ಲಕ್ಷ ರೂ,ಗಳಲ್ಲಿಯೇ ನೆರವೇರಿಸಿದರೆ?: ಕೇಜ್ರಿವಾಲ್