Select Your Language

Notifications

webdunia
webdunia
webdunia
webdunia

ಬಿಜೆಪಿ ಸಂಸದ ಮಹೇಶ್ ಶರ್ಮಾ ಪುತ್ರಿಯ ವಿವಾಹ 2.5 ಲಕ್ಷ ರೂ,ಗಳಲ್ಲಿಯೇ ನೆರವೇರಿಸಿದರೆ?: ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್
ನವದೆಹಲಿ , ಸೋಮವಾರ, 28 ನವೆಂಬರ್ 2016 (15:39 IST)
ಬಿಜೆಪಿ ಸಂಸದ ಮಹೇಶ್ ಶರ್ಮಾ ತಮ್ಮ ಪುತ್ರಿಯ ವಿವಾಹವನ್ನು 2.5 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನೆರವೇರಿಸಿದ್ದಾರೆಯೇ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.
 
ಬಿಜೆಪಿ ಸಂಸದ ಮಹೇಶ್ ಶರ್ಮಾ ತಮ್ಮ ಪುತ್ರಿಯ ವಿವಾಹಕ್ಕೆ ತಗುಲಿದ ಎಲ್ಲಾ ವೆಚ್ಚಗಳನ್ನು ಚೆಕ್ ಮೂಲಕ ಪಾವತಿಸಿದ್ದಾರೆಯೇ? 2.5 ಲಕ್ಷ ರೂಪಾಯಿಗಳಲ್ಲಿ ವಿವಾಹ ನೆರವೇರಿತೇ? ಅದು ಹೇಗೆ ನೋಟುಗಳನ್ನು ಬದಲಿಸಿದರು? ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
 
ವಿಪಕ್ಷಗಳು ನೋಟು ನಿಷೇಧ ಕುರಿತಂತೆ ಪ್ರತಿಭಟನೆ ನಡೆಸುತ್ತಿರುವಂತೆಯೇ ಆಪ್ ಪಕ್ಷ ಕೂಡಾ ಕೇಂದ್ರ ಸರಕಾರದ 500 ಮತ್ತು 1000 ರೂ ನೋಟುಗಳ ನಿಷೇಧ ಕುರಿತಂತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದೆ.  
 
ನವದೆಹಲಿಯ ಹಲವಾರು ಬ್ಯಾಂಕ್ ಮತ್ತು ಎಟಿಎಂಗಳಲ್ಲಿ ನೂರಾರು ಜನರು ಹಲವು ಗಂಟೆಗಳ ಕಾಲ ಸರದಿಯಲ್ಲಿ ನಿಂತು ಹಣವನ್ನು ಪಡೆಯಲು ಹರಸಾಹಸ ಪಡುತ್ತಿದ್ದರೆ, ಬಿಜೆಪಿ ನಾಯಕರಿಗೆ ಕೋಟಿ ಕೋಟಿ ಹಣ ಎಲ್ಲಿಂದ ಬರುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಕ್ಷಮೆ ಕೋರುವವರೆಗೆ ಕಲಾಪ ನಡೆಯೋಲ್ಲ: ವಿಪಕ್ಷಗಳು