Select Your Language

Notifications

webdunia
webdunia
webdunia
webdunia

ಅಜ್ಜಿಗಿಂತ ಆಸ್ತಿ ಮುಖ್ಯ, ಹೃದಯವಿದ್ರಾವಕ ಘಟನೆ

ಅಜ್ಜಿಗಿಂತ ಆಸ್ತಿ ಮುಖ್ಯ, ಹೃದಯವಿದ್ರಾವಕ ಘಟನೆ
ಬೆಂಗಳೂರು , ಶನಿವಾರ, 1 ಅಕ್ಟೋಬರ್ 2022 (14:55 IST)
ಪ್ರೈವೇಟ್ ಅಟೆಂಡೆನ್ಸ್‌ಗೆ ಅರ್ಜಿ ಸಲ್ಲಿಸಿದ ಬಗ್ಗೆ ನನಗೆ ಗೊತ್ತಿಲ್ಲ. ಅರ್ಜಿ ಕೊಟ್ರೆ ನಾವು ಪ್ರೈವೇಟ್ ಅಟೆಂಡೆನ್ಸ್ ಮಾಡುತ್ತೇವೆ. ಪ್ರೈವೇಟ್ ಅಟೆಂಡೆನ್ಸ್‌ಗೆ ಅರ್ಜಿ ಸಲ್ಲಿಸುವ ವೇಳೆ 1000 ರೂ‌. ಶುಲ್ಕ ಪಾವತಿಸಬೇಕಿರುತ್ತದೆ. ಆಗ ನಾವು ಓರ್ವ ಸಿಬ್ಬಂದಿ ನೇಮಿಸಿ ಕಳುಹಿಸಿಕೊಡುತ್ತೇವೆ ಎಂದು ಸಹಾಯಕ ಉಪನೋಂದಣಾಧಿಕಾರಿ ಸಚಿನ್​ ಹೇಳಿದ್ದಾರೆ.
ಬೆಳಗಾವಿ ತಾಲೂಕಿನ ಹಿರೇಬಾಗೆವಾಡಿ ನಿವಾಸಿ ಮಹಾದೇವಿ ಅಗಸಿಮನಿ (79) ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ 80 ವರ್ಷದ ವೃದ್ಧೆ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಿರೇಬಾಗೆವಾಡಿ ಗ್ರಾಮದಲ್ಲಿ ಮಹಾದೇವಿ ಹೆಸರಿನಲ್ಲಿ 2 ಎಕರೆ 35 ಗುಂಟೆ ಜಮೀನಿದ್ದು, ಆ ಜಮೀನನ್ನು ಮಕ್ಕಳಾದ ವಿದ್ಯಾ ಹೊಸಮನಿ(54) ಹಾಗೂ ರವೀಂದ್ರ ಗುರಪ್ಪ ಹೊಸಮನಿ(51) ಎಂಬುವರಿಗೆ ಹಕ್ಕುಬಿಟ್ಟು ಕೊಡಲು ಅರ್ಜಿ ಸಲ್ಲಿಸಿದ್ದರು.
 
ಆಸ್ತಿ ಹಂಚಿಕೆ ಸಂಬಂಧ ಹಕ್ಕುಪತ್ರಕ್ಕೆ ಹೆಬ್ಬೆಟ್ಟು ಒತ್ತಿ ಸಹಿ ಹಾಕುಲು ಮಹಾದೇವಿ ಅಗಸಿಮನಿ ಬೆಳಗಾವಿಯ ಉಪನೋಂದಣಿ ಕಚೇರಿಗೆ ಆಗಮಿಸಬೇಕಿತ್ತು. ಅಜ್ಜಿ ಅನಾರೋಗ್ಯದಿಂದ ಐಸಿಯುನಲ್ಲಿದ್ದ ಕಾರಣಕ್ಕೆ ಉಪನೋಂದಣಿ ಅಧಿಕಾರಿಗೆ ಆಸ್ಪತ್ರೆಗೆ ಬರಲು ಕುಟುಂಬಸ್ಥರು ಮನವಿ ಮಾಡಿದ್ದರು. ಆದ್ರೆ ಪ್ರೈವೇಟ್​ ಅರ್ಜಿ ಸಲ್ಲಿಸದ ಹಿನ್ನೆಲೆ ಸಿಬ್ಬಂದಿಯು ಅಜ್ಜಿ ಇದ್ದ ಸ್ಥಳಕ್ಕೆ ಬಂದಿಲ್ಲವಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಜಾದಿ ಕಾ ಅಮೃತ‌ ಸರೋವರ ಕಾಮಗಾರಿ ವೀಕ್ಷಣೆ ಮಾಡಿದ ನಿರ್ಮಲಾ ಸೀತಾರಾಮನ್