Select Your Language

Notifications

webdunia
webdunia
webdunia
webdunia

ಡಾಕ್ಟರ್‌ಗೂ ಟೋಪಿ ಹಾಕಿದ ಐಶ್ವರ್ಯ ಗೌಡ, ಬಗೆದಷ್ಟು ಹೊರಬರುತ್ತಿದೆ ಸುಂದರಿಯ ಕರಾಳ ಮುಖ

Gold Fraud Case, Aishwarya Gowda Background, EX MP Suresh Kumar,

Sampriya

ಬೆಂಗಳೂರು , ಮಂಗಳವಾರ, 7 ಜನವರಿ 2025 (15:11 IST)
Photo Courtesy X
ಬೆಂಗಳೂರು: ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಸಹೋದರಿ ಎಂದು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ವಂಚನೆ ಪ್ರಕರಣದ ಐಶ್ವರ್ಯಾ ಗೌಡ ವಿರುದ್ಧ ಇದೀಗ ಮತ್ತೊಂದು ದೂರು ದಾಖಲಾಗಿದೆ.

ಹಣ ಮತ್ತು ಚಿನ್ನಾಭರಣಗಳು ಸೇರಿದಂತೆ 5.03 ಕೋಟಿ ರೂ ವಂಚಿಸಿರುವುದಾಗಿ ಡಾ.ಮಂಜುಳಾ ಪಾಟೀಲ್ ಎಂಬುವವರು ಐಶ್ವರ್ಯಾ ಗೌಡ, ಅವರ ಪತಿ ಹರೀಶ್ ಕೆ.ಎನ್, ಕಾರು ಚಾಲಕ ಧನಂಜಯ್ ಹಾಗೂ ಅಶ್ವಥ್ ಎಂಬವರ ವಿರುದ್ಧ ಆರ್.ಆರ್.ನಗರ ಠಾಣೆಗೆ ದೂರು ನೀಡಿದ್ದಾರೆ.

ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆಯಾಗಿರುವ ಮಂಜುಳಾ ಪಾಟೀಲ್ ಅವರಿಗೆ 2020-21ನೇ ಸಾಲಿನಲ್ಲಿ ಚಿಕಿತ್ಸೆಗಾಗಿ ಬರುತ್ತಿದ್ದಾಗ ಐಶ್ವರ್ಯಾ ಗೌಡ ಪರಿಚಯವಾಗಿತ್ತು. ತಾನು, ಡಿ.ಕೆ.ಸುರೇಶ್ ಹಾಗೂ ಡಿ.ಕೆ.ಶಿವಕುಮಾರ್ ಅವರ ಸಹೋದರಿ ಎಂದು ಪರಿಚಯಿಸಿಕೊಂಡಿದ್ದ ಐಶ್ವರ್ಯಾ ಗೌಡ, ತನಗೆ ದೊಡ್ಡಮಟ್ಟದಲ್ಲಿ ರಿಯಲ್ ಎಸ್ಟೇಟ್, ಗೋಲ್ಡ್ ಬ್ಯುಸಿನೆಸ್‌, ಕೆಸಿನೋ ವ್ಯವಹಾರ ಇರುವುದಾಗಿ ಅವರಲ್ಲಿ ನಂಬಿಸಿದ್ದರು.

2022ರಿಂದ 2024ರವೆಗೂ ಹೂಡಿಕೆ, ಮತ್ತಿತರ ಕಾರಣಗಳನ್ನು ನೀಡಿ ಹಂತಹಂತವಾಗಿ 2.52 ಕೋಟಿ ರೂ ಹಣ ಹಾಗೂ 2.50 ಕೋಟಿ ಮೌಲ್ಯದ ಒಟ್ಟು 2 ಕೆ‌.ಜಿ 350 ಗ್ರಾಂ ಚಿನ್ನಾಭರಣ ಪಡೆದಿದ್ದ ಐಶ್ವರ್ಯಾ ಗೌಡ ಹಿಂದಿರುಗಿಸದೇ ಸಬೂಬು ಹೇಳುತ್ತಿದ್ದಳು.

ಇನ್ನೂ ಐಶ್ವರ್ಯಾ ಗೌಡ ವಿರುದ್ಧ ಪ್ರಕರಣ ದಾಖಲಾಗಿರುವ ವಿಚಾರ ಮಂಜುಳಾ ಪಾಟೀಲ್ ಅವರ ಗಮನಕ್ಕೆ ಬಂದಿತ್ತು.

ಮಂಜುಳಾ ನೀಡಿದ ದೂರಿನಲ್ಲಿ ಐಶ್ವರ್ಯಾ ಗೌಡ, ''ನಿನಗೆ ಕೊಡಬೇಕಿರುವ ಹಣ, ಚಿನ್ನಾಭರಣದ ಕುರಿತು ಯಾರಿಗೂ ಹೇಳಬಾರದು, ದೂರು ನೀಡಬಾರದು. ಹಾಗೇನಾದರೂ ದೂರು ನೀಡಿದರೆ, ಸಾಕ್ಷಿ ಹೇಳಿಕೆ ನೀಡಿದರೆ ಕೊಡಬೇಕಿರುವ ಹಣ ಚಿನ್ನಾಭರಣ ಕೊಡುವುದಿಲ್ಲ. ನಾನು ಡಿ.ಕೆ‌.ಸುರೇಶ್ ಹಾಗೂ ಡಿ.ಕೆ.ಶಿವಕುಮಾರ್ ಅವರ ಸಹೋದರಿ ಎಂಬುದು ಗೊತ್ತಿದೆ ತಾನೆ?" ಎಂದು ಬೆದರಿಕೆ ಹಾಕಿರುವುದಾಗಿ ಮಂಜುಳಾ ಪಾಟೀಲ್ ಪೊಲೀಸರಿಗೆ ದೂರು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿ ಕುರುಕ್ಷೇತ್ರಕ್ಕೆ ಮುಹೂರ್ತ ಫಿಕ್ಸ್‌: ಫೆ.5ರಂದು ಮತದಾನ, 8ರಂದು ರಿಸಲ್ಟ್‌