Select Your Language

Notifications

webdunia
webdunia
webdunia
webdunia

ಡಾ. ರಾಜಕುಮಾರ್ ಮನೆಗೆ ಸಂಜೆ ರಾಹುಲ್ ಗಾಂಧಿ ಭೇಟಿ

ಡಾ. ರಾಜಕುಮಾರ್ ಮನೆಗೆ ಸಂಜೆ ರಾಹುಲ್ ಗಾಂಧಿ ಭೇಟಿ
ಬೆಂಗಳೂರು , ಸೋಮವಾರ, 12 ಜೂನ್ 2017 (15:55 IST)
ನ್ಯಾಶನಲ್ ಹೆರಾಲ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಂಜೆ ನಟ ಸಾರ್ವಭೌಮ ಡಾ. ರಾಜಕುಮಾರ್ ಮನೆಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಪಾರ್ವತಮ್ಮ ರಾಜಕುಮಾರ್ ನಿಧನದ ಬಳಿಕ ದುಃಖತಪ್ತರಾಗಿರುವ ರಾಜಕುಮಾರ್ ಕುಟುಂಬ ಸದಸ್ಯರಿಗೆ ರಾಹುಲ್ ಗಾಂಧಿ ಸಾಂತ್ವನ ಹೇಳಲಿದ್ದಾರೆ. ಹೀಗಾಗಿ, ಸದಾಶಿವನಗರದ ರಾಜಕುಮಾರ್ ನಿವಾಸದ ಬಳಿಯ ರಸ್ತೆಗಳಲ್ಲಿ ನಿಲ್ಲಿಸಿದ್ದ ವಾಹನಗಳನ್ನ ತೆರವು ಮಾಡಲಾಗುತ್ತಿದೆ.  

ರಾಜಕುಮಾರ್ ನಿವಾಸಕ್ಕೆ ತೆರಳಲಿರುವ ರಾಹುಲ್ ಗಾಂದಿಗೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಂಪುಟ ಸದಸ್ಯರು ಸಾಥ್ ನೀಡಲಿದ್ದಾರೆ. ಇದಾದ ಬಳಿಕ ರಾಹುಲ್ ಗಾಂದಿ ರಾಜ್ಯದ ಮುಖಂಡರ ಜೊತೆ ಮುಂದಿನ ವಿಧಾನಸಭಾ ಚುನಾವಣಾ ತಯಾರಿ ಕುರಿತು ಮಾತುಕತೆ ನಡೆಸುವ ಸಾಧ್ಯತೆ ಇದೆ. ಚುನಾವಣೆಗೆ 10 ತಿಂಗಳು ಮಾತ್ರ ಬಾಕಿ ಉಳಿದಿದ್ದು, ಶತಾಯಗತಾಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ತಂತ್ರ ರೂಪಿಸಲಿದ್ದಾರೆ. ಇತ್ತೀಚೆಗೆ, ಪಕ್ಷದ ಹುದ್ದೆಗಳಿಗೆ ಬದಲಾವಣೆ ಮಾಡಿದ್ದು, ನಾಯಕರಲ್ಲಿರುವ ಅಸಮಾಧಾನವನ್ನ ಶಮನ ಮಾಡುವ ನಿಟ್ಟಿನಲ್ಲಿ ಮಾತುಕತೆ ನಡೆಸುವ ಸಾಧತೆ ಇದೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

Share this Story:

Follow Webdunia kannada

ಮುಂದಿನ ಸುದ್ದಿ

ಇದನ್ನು ಮದುವೆ 'ಆಮಂತ್ರಣ ಪತ್ರಿಕೆ' ಅನ್ನಬೇಕೋ ಅಥವಾ 'ಆಮಂತ್ರಣ ಪುಸ್ತಕ' ಅನ್ನಬೇಕೋ..?