Select Your Language

Notifications

webdunia
webdunia
webdunia
webdunia

ಇದನ್ನು ಮದುವೆ 'ಆಮಂತ್ರಣ ಪತ್ರಿಕೆ' ಅನ್ನಬೇಕೋ ಅಥವಾ 'ಆಮಂತ್ರಣ ಪುಸ್ತಕ' ಅನ್ನಬೇಕೋ..?

ಇದನ್ನು ಮದುವೆ 'ಆಮಂತ್ರಣ ಪತ್ರಿಕೆ' ಅನ್ನಬೇಕೋ ಅಥವಾ 'ಆಮಂತ್ರಣ ಪುಸ್ತಕ' ಅನ್ನಬೇಕೋ..?
ತೆಲಂಗಾಣ , ಸೋಮವಾರ, 12 ಜೂನ್ 2017 (15:38 IST)
ತೆಲಂಗಾಣ:ಮದುವೆ ಆಮಂತ್ರಣ ಪತ್ರಿಕೆಯನ್ನು ಹಲವರು ಹಲವು ರೀತಿಯಲ್ಲಿ ರೆಡಿ ಮಾಡಿಸುತ್ತಾರೆ ಕೆಲವರು ಚಿಕ್ಕದಾಗಿ ಮಾಡಿಸಿದ್ದರೆ ಇನ್ನು ಕೆಲವರು ಬೃಹದಾಕಾರದ ಇನ್ವಿಟೇಷನ್ ಕಾರ್ಡ್ ಮಾಡಿಸುತ್ತಾರೆ. ಆದರೆ ಇಲ್ಲೊಬ್ಬರು ’ಮದುವೆ ಆಹ್ವಾನ ಪತ್ರಿಕೆ’ಯನ್ನು ’ಮದುವೆ ಆಹ್ವಾನ ಪುಸ್ತಕ’ವನ್ನಾಗಿ ಪರಿವರ್ತಿಸಿದ್ದಾರೆ ನೋಡಿ.
 
ತೆಲಂಗಾಣದ ವರಂಗಲ್ ನ ಮೆಡಿಕಲ್ ಏಜನ್ಸಿಯವರೊಬ್ಬರು 108 ಪುಟಗಳ ವಿವಾಹ ಆಹ್ವಾನ ಪತ್ರಿಕೆಯನ್ನು ರೂಪಿಸಿದ್ದಾರೆ. ಭಾಗ್ಯಲಕ್ಷ್ಮಿ - ಶಿವಪ್ರಸಾದ್ ಎಂಬುವವರ ವಿವಾಹ ಇದೇ 14 ರಂದು ನೆರವೇರಲಿದೆ. ಹೈದರಾಬಾದ್‌ನಲ್ಲಿ ಮದುವೆ ನಡೆಯಲಿದ್ದು, 17ನೇ ತಾರೀಖು ಹನುಮುಕೊಂಡದ ನಕ್ಕಲಗುಟ್ಟ ಎಂಬಲ್ಲಿ ಆರತಕ್ಷತೆ ನೆರವೇರಲಿದೆ.  ಈ ವಿವಾಹಕ್ಕೆ ಆಮಂತ್ರಣ ಪತ್ರಿಕೆಯಲ್ಲ ಪುಸ್ತಕವನ್ನೇ ಮಾಡಲಾಗಿದೆ.
 
ಇದರಲ್ಲಿ ರೈಲು, ಬಸ್, ಬ್ಯಾಂಕ್‌, ಆ್ಯಂಬುಲೆನ್ಸ್, ಸರ್ಕಾರಿ ಆಸ್ಪತ್ರೆ, ಹೊಟೇಲ್‌, ಆಸ್ಪತ್ರೆಗಳ ಮಾಹಿತಿ, ವರಂಗಲ್‌ನಲ್ಲಿನ ಕಲ್ಯಾಣ ಮಂಟಪ, ಫಂಕ್ಷನ್‌ ಹಾಲ್‌ಗಳ ವಿವರ, ರಾಶಿ ಭವಿಷ್ಯ ಹೀಗೆ ಎಲ್ಲವನ್ನೂ ಒಳಗೊಂಡ ಒಂದು ಸಂಪೂರ್ಣ ಮಾಹಿತಿ ಪುಸ್ತಕ ಆಹ್ವಾನಪತ್ರಿಕೆಯಲ್ಲಿರುವುದು ವಿಶೇಷ.ಮುದ್ರಿಸಲಾಗಿದೆ. 
 
ಅಷ್ಟೇ ಅಲ್ಲ ಶಿವ, ಗಣಪತಿ, ಲಕ್ಷ್ಮಿ ನರಸಿಂಹ, ಸಾಯಿಬಾಬಾ, ವೆಂಕಟೇಶ್ವರಸ್ವಾಮಿ, ವಿಷ್ಣು, ಆಂಜನೇಯ, ಅಯ್ಯಪ್ಪ, ಮಹಾಲಕ್ಷ್ಮಿ ಅಷ್ಟೋತ್ತರ ಶತನಾಮಾವಳಿ, ಆಧ್ಯಾತ್ಮಿಕ ವಿಷಯಗಳು ಹೀಗೆ ಹಲವಾರು ವಿಶೇಷ ಮಾಹಿತ್ರಿಗಳು ಕೂಡ ವಿವಾಹ ಆಹ್ವಾನ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ. ಇನ್ವಿಟೇಷನ್ ಕಾರ್ಡ್ ಅವರವರ ಕ್ರಿಯೆಟಿವಿಟಿಗೆ, ಅವರವ ಇಷ್ಟದಂತೆ ರೆಡಿಮಾಡುತ್ತಾರೆ ನಿಜ. ಆದ್ರೆ ಇಲ್ಲಿ ಸ್ವಲ್ಪ ಕ್ರಿಯೆಟಿವಿಟಿ ಜಾಸ್ತಿನೆ ಆಯ್ತು ಅನ್ಸತ್ತೇನೋ.. 
 

Share this Story:

Follow Webdunia kannada

ಮುಂದಿನ ಸುದ್ದಿ

ಇನ್ಮುಂದೆ ಚೆಕ್ ಬೌನ್ಸ್ ಆದರೆ ಜಾಮೀನು ರಹಿತ ಜೈಲು ಶಿಕ್ಷೆ..