ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ಕಥಾಹಂದರ ಹೊಂದಿರುವ ದ ಕಾಶ್ಮೀರಿ ಫೈಲ್ಸ್ ಚಿತ್ರವು ಕೇಂದ್ರ ಸರ್ಕಾರ ಪ್ರಾಯೋಜಿತವೂ ಅಲ್ಲ, ಜೊತೆಗೆ ಚಿತ್ರ ಇಸ್ಲಾಮೋಫೋಬಿಯಾದಿಂದಲೂ ಮಾಡಿದ್ದಲ್ಲ. ಆದರೂ ಕೆಲ ವಿದೇಶಿ ಮಾದ್ಯಮಗಳು ಚಿತ್ರದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಅಭಿಯಾನ ನಡೆಸುತ್ತಿವೆ ಎಂದು ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಬೇಸರ ವ್ಯಕ್ತಪಡಿಸಿದ್ದಾರೆ..ಚಿತ್ರದ ಕುರಿತ ಕೆಲ ಅನುಮಾನ ಬಗೆಹರಿಸಲು ವಿವೇಕ್ ದೆಹಲಿಯ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು,ಇಡೀ ಚಿತ್ರವನ್ನು ಕೇವಲ ಹಿಂದೂ- ಮುಸ್ಲಿಂ ಎಂಬ ದೃಷ್ಟಿಕೋನದಲ್ಲೇ ವಿಶ್ಲೇಷಿಸಿ ನನಗೆ ಕರೆ ಮಾಡ್ತಿದ್ರು.. ಒಬ್ಬರೇ ಒಬ್ಬರು ಕೂಡ, ಚಿತ್ರದಲ್ಲಿ ನಾನು ಸಂದರ್ಶನ ಮಾಡಿರುವ ಸಂತ್ರಸ್ತರ ಬಗ್ಗೆ ವಿಚಾರಿಸುವ ಗೋಜಿಗೆ ಹೋಗಲಿಲ್ಲ. ನಾನು ಚಿತ್ರದಲ್ಲಿ ತೋರಿಸಿದ ಸಾಕ್ಷ್ಯಗಳ ಬಗ್ಗೆ ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ರು