Publish Date: Sat, 07 May 2022 (20:38 IST)
Updated Date: Sat, 07 May 2022 (20:43 IST)
ವಿಜಯಪುರದಲ್ಲಿರೋ ಐತಿಹಾಸಿಕ ಗೋಲಗುಮ್ಮಟ ಆವರಣದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ. ಕಾರ್ಯಕರ್ತರು ಜೈ ಶ್ರೀರಾಮ, ಕಟ್ಟಿದೇವು ಕಟ್ಟಿದೇವು ರಾಮ ಮಂದಿರ ಕಟ್ಟಿದೇವು ಅಂತ ಘೋಷಣೆ ಕೂಗಿದ್ದಾರೆ. ಜೊತೆಗೆ ಪ್ರಚೋದನಕಾರಿಯಾಗಿ ಬರೆದು ವಿಡಿಯೋ ಶೇರ್ ಮಾಡಿದ್ದಾರೆ. ಗಂಡಾಗಿ ಹುಟ್ಟಿ ತನ್ನ ಮಾತೃ ಧರ್ಮದ ಪರ ಸ್ವಲ್ಪವೂ ಕಾಳಜಿ ತೋರದವರ ನಡುವೆ. ದುರ್ಗೆಯರಂತೆ ಧರ್ಮದ ರಕ್ಷಣೆಗೆ ನಿಂತಿರುವ ನಮ್ಮ ಎಲ್ಲಾ ಸಹೋದರಿಯರಿಗೆ ಅನಂತ ಅನಂತ ಧನ್ಯವಾದಗಳು ಎಂದು ವಿಡಿಯೋ ವೈರಲ್ ಮಾಡಲಾಗುತ್ತಿದೆ.