Select Your Language

Notifications

webdunia
webdunia
webdunia
webdunia

ಟ್ರ್ಯಾಕ್ಟರ್ ನಿಷೇಧ ಬೆನ್ನಲ್ಲೇ ಸರ್ಕಾರದ ವಿರುದ್ದ ಟ್ರಾಕ್ಟರ್ ಮಾಲೀಕರಿಂದ ಧರಣಿ

ಟ್ರ್ಯಾಕ್ಟರ್ ನಿಷೇಧ ಬೆನ್ನಲ್ಲೇ ಸರ್ಕಾರದ ವಿರುದ್ದ ಟ್ರಾಕ್ಟರ್ ಮಾಲೀಕರಿಂದ ಧರಣಿ
bangalore , ಗುರುವಾರ, 9 ಫೆಬ್ರವರಿ 2023 (14:17 IST)
ಬೆಂಗಳೂರಿನ ರಸ್ತೆಗಳಲ್ಲಿ ಟ್ರ್ಯಾಕ್ಟರ್ ನಿಷೇಧ ಬೆನ್ನಲ್ಲೇ ಸರ್ಕಾರದ ವಿರುದ್ದ ಟ್ರಾಕ್ಟರ್ ಮಾಲೀಕರು ಹಾಗೂ ಡ್ರೈವರ್ ಗಳು ಸಿಡಿದೆದ್ದಿದ್ದಾರೆ.
 
ಪ್ರತಿಭಟನೆ ಹಿನ್ನಲೆ ನಿನ್ನೆ ರಾತ್ರಿಯೇ ಸಿಟಿಗೆ  ಟ್ರಾಕ್ಟರ್ ಗಳು ಎಂಟ್ರಿಕೊಟ್ಟಿದೆ.ನಿನ್ನೆ ರಾತ್ರಿಯೇ ೧೦ ರಿಂದ ೧೫ ನಿಮಿಷಗಳ‌ ಕಾಲ ಪೊಲೀಸರಿಗೆ ಅಯ್ಯೊಯ್ಯೋ ಅನಿಸಿದೆ. ಟ್ರಾಕ್ಟರ್ ಮಾಲೀಕರು ಸಿಟಿ ಎಂಟ್ರಿ ಬೆನ್ನಲ್ಲೇ ಕೃಷ್ಣ ಬಳಿ ಟ್ರಾಕ್ಟರ್ ಗಳನ್ನ ಪೊಲೀಸರು ತಡೆದಿದ್ದಾರೆ.
 
ಪೊಲೀಸರ ತಡೆ ಬೆನ್ನಲ್ಲೆ ನಡು ರಸ್ತೆಯಲ್ಲೇ ಮಲಗಿ ಟ್ರಾಕ್ಟರ್ ಮಾಲೀಕರು  ಪ್ರತಿಭಟನೆ ನಡೆಸಿದ್ದಾರೆ.ಟ್ರಾಕ್ಟರ್ ಮಾಲೀಕರು ಹಾಗೂ ಡ್ರೈವರ್ ಗಳ ಆಕ್ರೋಶಕ್ಕೆ ಪೊಲೀಸರು ಸುಸ್ತಾಗೋಗಿದ್ದಾರೆ.ಕೊನೆಗೂ ಟ್ರಾಕ್ಟರ್ ಗಳನ್ನ ಫ್ರೀಡಂಪಾರ್ಕ್ ನಲ್ಲಿ ನಿಲ್ಲಿಸುವಂತೆ ಪೊಲೀಸರು ಸೂಚಿಸಿ ಕಳಿಸಿದ್ದಾರೆ.ಈಗ ಮತ್ತೆ ಇಂದು  ಟ್ರಾಕ್ಟರ್ ಮಾಲೀಕರು ಹಾಗೂ ಡ್ರೈವರ್ ಗಳು ಬೃಹತ್ ಧರಣಿ ನಡೆಸುತ್ತಿದ್ದಾರೆ.
 
ರಸ್ತೆಯಲ್ಲಿ ಟ್ರಾಕ್ಟರ್ ಗಳನ್ನು ನಿಲ್ಲಿಸಿ ಕರ್ನಾಟಕ ಸೇನೆ ರಾಜ್ಯಾಧ್ಯಕ್ಷ ಬಸವರಾಜ್ ಪಡುಕೋಟಿ ನೇತೃತ್ವದಲ್ಲಿ ಪ್ರತಿಭಟನೆ ಮಾಡ್ತಿದ್ದಾರೆ.ಗ್ರಾಮ ಮಾಲೀಕರು, ಚಾಲಕರು, ಕಟ್ಟಡ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರು ಸೇರಿದಂತೆ ಸಾವಿರಾರು ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.ಬೆಂಗಳೂರು ರಸ್ತೆಯಲ್ಲಿ ಟ್ರಾಕ್ಟರ್ ನಿಷೇಧದಿಂದ ಚಾಲಕರಿಗೆ ಭಾರಿ ನಷ್ಟ ಉಂಟಾಗಿದೆ.೪೦ ಸಾವಿರ ಕ್ಕೂ ಅಧಿಕ ಟ್ರಾಕ್ಟರ್ ಮಾಲಿಕರು, ಚಾಲಕರು, ಕಟ್ಟಡ ಕಾರ್ಮಿಕರು, ಬೀದಿಪಾಲಾಗಿದ್ದಾರೆ.ಬಿಗ್ ಬಾಸ್ ಖ್ಯಾತಿಯ ರೂಪೇಶ್ ರಾಜಣ್ಣ , ಹರೀಶ್ ಬೈರಪ್ಪ ರಾಜ್ಯಾಧ್ಯಕ್ಷರು ಕರ್ನಾಟಕ ರಣಧೀರ ಪಡೆ ಸೇರಿದಂತೆ ಹಲವು ಸಂಘದಿಂದ ಪ್ರತಿಭಟನೆ ನಡೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅವಶೇಷಗಳಡಿ ಜನಿಸಿದ ಮಗು..!