ಸಿಲಿಕಾನ್ ಸಿಟಿ ಅಂತಹ ಬ್ಯುಸಿ ನಗರದಲ್ಲಿ ಆರು ತಿಂಗಳಿಂದ ಮಹಿಳೆ ಶವ ಕೊಳೆಯುತ್ತಿದೆ.ನಿನ್ನೆ ಪೊಲೀಸರು ಮೂತ್ರ ವಿಸರ್ಜನೆಗೆ ಹೋದಾಗ ಅಸ್ತಿಪಂಜರ ಕಣ್ಣಿಗೆ ಕಂಡಿದೆ.ಆರು ತಿಂಗಳ ಬಳಿಕ ಮಹಿಳೆ ಶವ ನೋಡಿ ಪೊಲೀಸರಿಗೆ ಶಾಕ್ ಆಗಿದೆ.ಮಲಯಾಳಂ ಕೋಲ್ಡ್ ಕೇಸ್ ಸಿನಿಮಾ ಮಾದರಿಯಲ್ಲಿ ಆರು ತಿಂಗಳ ಬಳಿಕ ಶವದ ಮೂಳೆಗಳು ಪತ್ತೆಯಾಗಿದೆ.ಸಿಕ್ಕ ತಲೆ ಬುರುಡೆ ಹಾಗೂ ಅಸ್ತಿಪಂಜರದ ಸುತ್ತ ಹಲವು ಅನುಮಾನಗಳು ಶುರುವಾಗಿದೆ.ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅವಶೇಷಗಳು ಪತ್ತೆಯಾಗಿದ್ದು,ಹುಳಿಮಾವು ಬಳಿಯ ಅಕ್ಷಯನಗರದ ಬಳಿ ಅಸ್ತಿಪಂಜರ ಪತ್ತೆಯಾಗಿದೆ.ಆದ್ರೆ ಯಾರದ್ದು ಅಸ್ಥಿಪಂಜರ ಏನು ಅನ್ನೋದ್ರ ಬಗ್ಗೆ ಪೊಲೀಸರು ತಲೆಕೆಡಿಸಿಕೊಂಡು ತನಿಖೆ ನಡೆಸ್ತಿದ್ದಾರೆ.
ಸದ್ಯಕ್ಕೆ ಎಫ್ ಎಸ್ ಎಲ್ ತಂಡ ಸಹ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದೆ.ಮೇಲ್ನೋಟಕ್ಕೆ ಸತ್ತು ಆರೇಳು ತಿಂಗಳು ಆಗಿದೆ ಅನ್ನೋ ಅನುಮಾನ ಎಫ್ ಎಸ್ ಎಲ್ ವ್ಯಕ್ತಪಡಿಸಿದೆ.ಆದರೆ ವೈದ್ಯಕೀಯ ಪರೀಕ್ಷೆಗಳಿಂದಷ್ಟೆ ಎಲ್ಲದಕ್ಕೂ ಉತ್ತರ ಸಿಗಬೇಕಿದೆ.