Select Your Language

Notifications

webdunia
webdunia
webdunia
webdunia

ಕರ್ನಾಟಕ ಸಹಿತ ಆರು ರಾಜ್ಯಗಳಿಗೆ ಕೇಂದ್ರದಿಂದ ಹೆಚ್ಚುವರಿ ಅನುದಾನ

ಕರ್ನಾಟಕ ಸಹಿತ ಆರು ರಾಜ್ಯಗಳಿಗೆ ಕೇಂದ್ರದಿಂದ ಹೆಚ್ಚುವರಿ ಅನುದಾನ
bangalore , ಶುಕ್ರವಾರ, 31 ಡಿಸೆಂಬರ್ 2021 (19:14 IST)
ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ (ಎನ್.ಡಿ.ಆರ್.ಎಫ್.) ಅಡಿಯಲ್ಲಿ 2021ರ ಸಾಲಿನಲ್ಲಿ ಪ್ರವಾಹ, ಭೂಕುಸಿತ ಮತ್ತು ಚಂಡಮಾರುತದಿಂದ ಬಾಧಿತವಾದ ಆರು ರಾಜ್ಯಗಳಿಗೆ ಕೇಂದ್ರ ಹೆಚ್ಚುವರಿ ನೆರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆ (ಎಚ್.ಎಲ್.ಸಿ.) ಅನುಮೋದಿಸಿದೆ.
‘ತೌಕ್ತೆ’ ಚಂಡಮಾರುತ ಹಿನ್ನೆಲೆಯಲ್ಲಿ ಗುಜರಾತ್‌ಗೆ ₹ 1,133.35 ಕೋಟಿಯನ್ನು, ‘ಯಾಸ್’ ಚಂಡಮಾರುತ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳಕ್ಕೆ ₹ 586.59 ಕೋಟಿ, 2021ರ ಮುಂಗಾರು ಋತುವಿನಲ್ಲಿ ಪ್ರವಾಹ /ಭೂಕುಸಿತ ಹಿನ್ನೆಲೆಯಲ್ಲಿ ಅಸ್ಸಾಂಗೆ ₹ 51.53 ಕೋಟಿ, ಕರ್ನಾಟಕಕ್ಕೆ ₹ 504.06 ಕೋಟಿ, ಮಧ್ಯಪ್ರದೇಶಕ್ಕೆ ₹ 600.50 ಕೋಟಿ ಮತ್ತು ಉತ್ತರಖಂಡಕ್ಕೆ ₹ 187.18 ಕೋಟಿ ಸೇರಿ ಒಟ್ಟು ₹ 3,063.21 ಕೋಟಿ ಹೆಚ್ಚುವರಿ ಕೇಂದ್ರೀಯ ನೆರವನ್ನು ಎನ್.ಡಿ.ಆರ್.ಎಫ್.ನಿಂದ ಅನುಮೋದಿಸಲಾಗಿದೆ.
ಈ ಹೆಚ್ಚುವರಿ ನೆರವು, ಈಗಾಗಲೇ ರಾಜ್ಯಗಳಿಗೆ ರಾಜ್ಯ ವಿಪತ್ತು ಸ್ಪಂದನಾ ನಿಧಿ (ಎಸ್.ಡಿ.ಆರ್.ಎಫ್.)ನಡಿ ರಾಜ್ಯಗಳಿಗೆ ಕೇಂದ್ರವು ಬಿಡುಗಡೆ ಮಾಡಲಾಗಿರುವ ನಿಧಿಗಿಂತ ಹೆಚ್ಚುವರಿಯಾದುದಾಗಿದೆ. 2021-22ರ ಆರ್ಥಿಕ ವರ್ಷದಲ್ಲಿ ಕೇಂದ್ರ ಸರಕಾರ 28 ರಾಜ್ಯಗಳಿಗೆ ಎಸ್.ಡಿ.ಆರ್.ಎಫ್.ನಡಿ ₹ 17,757.20 ಕೋಟಿ ಬಿಡುಗಡೆ ಮಾಡಿದ್ದರೆ, ಎನ್.ಡಿ.ಆರ್.ಎಫ್.ನಿಂದ 7 ರಾಜ್ಯಗಳಿಗೆ ₹ 3542.54 ಕೋಟಿ ಬಿಡುಗಡೆ ಮಾಡಿದೆ.
‘ತೌಕ್ತೆ’ ಮತ್ತು ‘ಯಾಸ್’ ಚಂಡಮಾರುತದ ನಂತರ ಮೇ 20ರಂದು ಎನ್.ಡಿ.ಆರ್.ಎಫ್.ನಿಂದ ಗುಜರಾತ್‌ಗೆ ₹ 1000 ಕೋಟಿ ಮತ್ತು ಮೇ 29ರಂದು ಪಶ್ಚಿಮ ಬಂಗಾಳಕ್ಕೆ ₹ 300 ಕೋಟಿಗಳನ್ನು ಮುಂಗಡವಾಗಿ ಬಿಡುಗಡೆ ಮಾಡಲಾಗಿತ್ತು.
2021-22ರ ಸಾಲಿನಲ್ಲಿ, ಕೇಂದ್ರ ಸರಕಾರವು ಪ್ರಕೃತಿ ವಿಕೋಪ ಪೀಡಿತ ರಾಜ್ಯ ಸರಕಾರಗಳಿಂದ ಜ್ಞಾಪನಾ ಪತ್ರದ ಸ್ವೀಕೃತಿಗೆ ಕಾಯದೆ, ಪ್ರಕೃತಿ ವಿಕೋಪಗಳಾದ ನಂತರ ತಕ್ಷಣವೇ 22 ಅಂತರ್-ಸಚಿವಾಲಯದ ಕೇಂದ್ರೀಯ ತಂಡಗಳನ್ನು (ಐ.ಎಂ.ಸಿ.ಟಿ.ಗಳು) ನಿಯುಕ್ತಿಗೊಳಿಸಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಮಹತ್ವದ GST ಕೌನ್ಸಿಲ್ ಸಭೆ..! ಜನಸಾಮಾನ್ಯರಿಗೆ ಸಿಗಲಿದೆಯಾ ನೆಮ್ಮದಿ ಸುದ್ದಿ...??