Publish Date: Tue, 17 Apr 2018 (16:49 IST)
Updated Date: Tue, 17 Apr 2018 (16:53 IST)
ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಸ್ಯಾಂಡಲ್ ವುಡ್ ತಾರೆಯರು ರಾಜಕೀಯ ಪ್ರಚಾರಕ್ಕೆ ಇಳಿದಿದ್ದು, ಇದೀಗ ನಟಿ ಅಮೂಲ್ಯ ಕೂಡ ರಾಜಕೀಯ ಪಕ್ಷಯೊಂದರ ಪರವಾಗಿ ಪ್ರಚಾರಕ್ಕೆ ಇಳಿದಿದ್ದಾರೆ.
ಮಂಗಳವಾರ (ಇಂದು) ನಟಿ ಅಮೂಲ್ಯ ಅವರ ಮಾವ ರಾಮಚಂದ್ರ ಅಧಿಕೃತವಾಗಿ ಜೆ ಡಿ ಎಸ್ ಪಕ್ಷ ಸೇರಿಕೊಂಡಿರುವ ಹಿನ್ನಲೆಯಲ್ಲಿ ನಟಿ ಅಮೂಲ್ಯ ಮತ್ತು ಅವರ ಪತಿ ಜಗದೀಶ್ ಅವರು ಕೂಡ ಜೆ ಡಿ ಎಸ್ ಪಕ್ಷ ಸೇರಿದ್ದಾರೆ.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅಮೂಲ್ಯ ಅವರು,’ ನನಗೆ ರಾಜಕೀಯ ಅಷ್ಟು ಗೊತ್ತಿಲ್ಲ. ಮಾವನವರಿಗೆ ಬೆಂಬಲವಾಗಿ ನಿಲ್ಲುತ್ತೇನೆ. ಸದ್ಯಕ್ಕೆ ನಮ್ಮ ಕ್ಷೇತ್ರದಲ್ಲಿ ಮಾತ್ರ ಮಾವನವರ ಪರ ಪ್ರಚಾರ ಮಾಡುತ್ತೇನೆ. ರಾಜ್ಯಾದ್ಯಂತ ಪಕ್ಷದ ಪರ ಪ್ರಚಾರ ಮಾಡುವ ಬಗ್ಗೆ ಯೋಚನೆ ಮಾಡಿಲ್ಲ ಎಂದು ಅಮೂಲ್ಯ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ