Publish Date: Tue, 02 Apr 2019 (21:07 IST)
Updated Date: Tue, 02 Apr 2019 (21:09 IST)
ಜೀವನದಲ್ಲಿ ಏನೂ ಬೇಕಾದ್ರೂ ಮರಿಬಹುದು. ಆದರೆ ಅದನ್ನು ಮರೆಯಲೇಬಾರದು ಅಂತ ನಟ ಯಶ್ ಹೇಳಿದ್ದಾರೆ.
ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡುವಾಗ ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಎಂದಿಗೂ ನಾವು ಏನೇ ಆಗಿದ್ದರೂ ನಾವು ನಡೆದು ಬಂದ ದಾರಿಯನ್ನು ಮರೆಯಬಾರದು ಎಂದಿದ್ದಾರೆ.
ಕಷ್ಟಕಾಲದಲ್ಲಿ ನೆರವಿಗೆ ಬಂದವರನ್ನು ಎಂದೂ ಮರೆಯಬಾರದು. ಅಂಬರೀಶ್ ಅಣ್ಣ ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ವ್ಯಕ್ತಿ ಎಂದರು.