Select Your Language

Notifications

webdunia
webdunia
webdunia
webdunia

ಟಿನ್ ಪ್ಯಾಕ್ಟರಿ ಮೆಟ್ರೋ ನಿಲ್ದಾಣಕ್ಕೆ ನಟ ದಿವಂಗತ ಶಂಕರ್ ನಾಗ್ ಹೆಸರಿಡುವಂತೆ ಒತ್ತಾಯ

Actor Shankar Nag
bangalore , ಭಾನುವಾರ, 3 ಅಕ್ಟೋಬರ್ 2021 (16:13 IST)
ಬೆಂಗಳೂರಿನ ಕೆಆರ್ ಪುರಂ ಟಿನ್ ಪ್ಯಾಕ್ಟರಿ ಮೆಟ್ರೋ ನಿಲ್ದಾಣಕ್ಕೆ ನಟ ದಿವಂಗತ ಶಂಕರ್ ನಾಗ್ ಹೆಸರಿಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಸಿಟಿಜನ್ ಕೆ.ಆರ್. ಪುರಂ ಸಂಘಟನೆ ಸದಸ್ಯರಿಂದ ಟಿನ್ ಫ್ಯಾಕ್ಟರಿ ಬಳಿ ಈ ಪ್ರತಿಭಟನೆ ನಡೆದಿದೆ. ಈಗಾಗಲೇ ಬೆಂಗಳೂರಿನಲ್ಲಿ ಎರಡನೇ ಹಂತದ ಮೆಟ್ರೋ ಕಾಮಗಾರಿ ನಡೆಯುತ್ತಿದೆ.  ಯಾವುದಾದರೂ ಒಂದು  ಮೆಟ್ರೋ ನಿಲ್ದಾಣಕ್ಕೆ ನಟ  ಶಂಕರ್ ನಾಗ್ ಅವರ ಹೆಸರಿಡುವ ಬಗ್ಗೆ ಸರ್ಕಾರದಲ್ಲಿ ಚರ್ಚೆಯಾಗಿದೆ. ಈ ಹಿನ್ನೆಲೆಯಲ್ಲಿ ಟಿನ್ ಫ್ಯಾಕ್ಟರಿ ಸಮೀಪ ನಿರ್ಮಾಣವಾಗುತ್ತಿರುವ ಮೆಟ್ರೋ ನಿಲ್ದಾಣಕ್ಕೆ ಶಂಕರ್ ನಾಗ್ ಹೆಸರಿಡುವಂತೆ ಸಿಟಿಜನ್ ಕೆ.ಆರ್. ಪುರಂ  ಸಂಘ ಹಾಗೂ ಕರುನಾಡ ಸೇವಕರ ಸಂಘಟನೆ ಸದಸ್ಯರು ಮನವಿ ಮಾಡಿದ್ರು. ನಟ ಶಂಕರನಾಗ್ ಮೂವತ್ತು ವರ್ಷಗಳ ಹಿಂದೆಯೇ ಮೆಟ್ರೊ ಕಲ್ಪನೆಯ ಕನಸು ಕಂಡಿದ್ದರು. ಸ್ವಂತ ದುಡ್ಡಿನಲ್ಲಿ ಇಂಗ್ಲೆಂಡಿಗೆ ತೆರಳಿ ಬೆಂಗಳೂರಿನಲ್ಲಿ ಮೆಟ್ರೋ ನಿಲ್ದಾಣದ ಬಗ್ಗೆ ನೀಲಿ ನಕ್ಷೆ ಅನ್ನು ತಂದಿದ್ದರು . ಅವರ  ಸ್ಮರಣಾರ್ಥವಾಗಿ ಟಿನ್ ಫ್ಯಾಕ್ಟರಿ ಮೆಟ್ರೊ ನಿಲ್ದಾಣಕ್ಕೆ ನಟ ಶಂಕರ್ ನಾಗ್ ಅವರ ಹೆಸರು ಅವ್ರ ಸೇವೆಗೆ ನೀಡುವ ಗೌರವವಾಗಿರುತ್ತೆ. ಅಲ್ಲದೇ ಮುಂದಿನ ಪೀಳಿಗೆಗೆ ಶಂಕರ್ ನಾಗ್ ಸಾಧನೆಯನ್ನ ತಿಳಿಯುತ್ತೆ ಎಂದು ಸಿಎಂ ಹಾಗೂ ನಗರಾಭಿವೃದ್ಧಿ ಸಚಿವರಿಗೆ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ನಂತರ ಆರ್ಥಿಕ ಚಟುವಟಿಕೆಗಳಿಗೆ ಸರ್ಕಾರ ಅನುಮತಿ