Select Your Language

Notifications

webdunia
webdunia
webdunia
webdunia

ಬಾಲಕಿ ಸಾವಿಗೆ ನ್ಯಾಯ ಸಿಗಲೇಬೇಕು-ನಟ ಚೇತನ್

Actor Chetan should get justice for the girl's death
ಕಲಬುರಗಿ , ಶುಕ್ರವಾರ, 4 ನವೆಂಬರ್ 2022 (17:46 IST)
ಆಳಂದ್ ನಲ್ಲಿ ಶಾಲಾ ಬಾಲಕಿ ಮೇಲೆ ಅತ್ಯಾಚಾರ ಕೊಲೆ ಪ್ರಕರಣ ಸಂಬಂಧಿಸಿದಂತೆ ಕಲಬುರಗಿಯಲ್ಲಿ  ನಟ ಚೇತನ್ ಸುದ್ದಿಗೋಷ್ಟಿ ನಡೆಸಿದ್ರು. 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆಯಾಗಿದೆ. ಇದು ಕರ್ನಾಟಕದ ಜನತೆಗೆ ಬಹಳ ನೋವಾಗಿದೆ. 14 ವರ್ಷದ ಬಾಲಕಿ ಒಂದು ಕುಟುಂಬದ‌ ಮಗಳಲ್ಲ, ಕರ್ನಾಟಕದ ಮಗಳಲ್ಲ. ಇಂತಹ ಪ್ರಕರಣ ನಡೆದಾಗ ಜಾತಿ ಲೇಪನ ಕಟ್ಟುವ ಕೆಲಸ ಆಗುತ್ತೆ. ಆದ್ರೆ ಈ ಕೇಸ್​​​ನಲ್ಲಿ ಎಲ್ಲರು ಬಾಲಕಿ ಪರವಾಗಿ ನಿಂತಿದ್ದಾರೆ. ಇದು ಜಾತಿಗೆ ಸೀಮಿತವಾಗಿಲ್ಲ. ಬಾಲಕಿಯ ಕುಟುಂಬಕ್ಕೆ ನಾನು ಹೋಗಿ ಸಾಂತ್ವನ ನೀಡಿ ಬಂದಿದ್ದೇನೆ. ಬಾಲಕಿ ಸಾವಿಗೆ ತೀವ್ರವಾಗಿ ನ್ಯಾಯ ಸಿಗಬೇಕು. ಪ್ರಕರಣದಲ್ಲಿ ಒಬ್ಬ ಬಾಲಕನನ್ನ ಅರೆಸ್ಟ್ ಮಾಡಿದ್ದಾರೆ, ಅವನಿಗೆ ತಕ್ಕ ಶಿಕ್ಷೆ ಆಗಬೇಕು. ಆ ಬಾಲಕಿಯ ಕುಟುಂಬಕ್ಕೆ ಸರ್ಕಾರ ಪರಿಹಾರ ಒದಗಿಸಬೇಕು ಎಂದು ನಟ ಚೇತನ್ ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಕೆರೆಯಲ್ಲಿ ಮುಳುಗಿ ಇಬ್ಬರು ಸಾವು