Select Your Language

Notifications

webdunia
webdunia
webdunia
webdunia

ಅಕ್ರಮ ಸಂಪತ್ತು ಹೊಂದಿರುವವರನ್ನು ಮುಲಾಜಿಲ್ಲದೆ ಬಲಿ ಹಾಕಬೇಕು: ಸಚಿವ ರಮೇಶ್

ಅಕ್ರಮ ಸಂಪತ್ತು ಹೊಂದಿರುವವರನ್ನು ಮುಲಾಜಿಲ್ಲದೆ ಬಲಿ ಹಾಕಬೇಕು: ಸಚಿವ ರಮೇಶ್
ಬೆಂಗಳೂರು , ಮಂಗಳವಾರ, 24 ಜನವರಿ 2017 (17:03 IST)
ಅಕ್ರಮ ಸಂಪತ್ತು ಹೊಂದಿರುವವರನ್ನು ಮುಲಾಜಿಲ್ಲದೆ ಬಲಿ ಹಾಕಬೇಕು ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ.
 
ಸಣ್ಣ ಕೈಗಾರಿಕೆ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಕಾಂಗ್ರೆಸ್ ಮಹಿಳಾ ಆಯೋಗದ ಅಧ್ಯಕ್ಷೆ ಲಕ್ಷ್ಮೀ ಹೆಬಾಳ್ಕರ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ 12 ಕೆಜಿ ಚಿನ್ನ ಹಾಗೂ 165 ಕೋಟಿ ರೂಪಾಯಿ ಅಕ್ರಮ ಸಂಪತ್ತು ಹತ್ತೆ ಮಾಡಿರುವ ಕುರಿತು ಸಿಎಂ ಗೃಹ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಯಾರೇ ಕಳ್ಳ ಒಡುವೆಗಳನ್ನು ದಾಸ್ತಾನು ಮಾಡಿದರು ಅದನ್ನು ವಶಪಡಿಸಿಕೊಳ್ಳಬೇಕು ಎಂದರು. 
 
ಕೇವಲ ಭಾಷಣದಿಂದ ಯಾವುದೇ ಪ್ರಯೋಜನೆ ಇಲ್ಲ. ವಾಸ್ತವದಲ್ಲೂ ಪ್ರಾಮಾಣಿಕತೆ ಇರಬೇಕು. ಯಾರೇ ಅಕ್ರಮ ಎಸೆಗಿದ್ದರೂ ಅದು ಅಕ್ರಮವೇ, ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ತಿಳಿಸಿದರು. 
 
2009 ರಿಂದ ಖಾಸಗಿ ಆಸ್ಪತ್ರೆಗಳು ಸರಕಾರದ ವಿವಿಧ ಯೋಜನೆಗಳಿಂದ ಹಣ ಪಡೆದುಕೊಂಡು ಇದೀಗ ಬೆದರಿಕೆ ಒಡ್ಡುತ್ತಿವೆ. ಇಂತಹ ಬೆದರಿಕೆಗಳಿಗೆ ರಾಜ್ಯ ಸರಕಾರ ಮಣಿಯುವುದಿಲ್ಲ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಖಡಕ್‌ ಆಗಿ ಹೇಳಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹಲ್ಲೆ ಪ್ರಕರಣ: ಹೈಕೋರ್ಟ್‌ನಿಂದ ಕಾಂಗ್ರೆಸ್ ಶಾಸಕನ ಅರ್ಜಿ ವಜಾ