Publish Date: Tue, 24 Jan 2017 (16:58 IST)
Updated Date: Tue, 24 Jan 2017 (17:03 IST)
ಯುಬಿ ಸಿಟಿಯ ಸ್ಕೈಬಾರ್‌ನಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣ ರದ್ದು ಕೋರಿ ಶಾಸಕ ವಿಜಯಾನಂದ್ ಕಾಶಪ್ಪನವರ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿದೆ.
2014ರ ಜುಲೈ 1ರಂದು ಕಬ್ಬನ ಪಾರ್ಕ್ ಠಾಣೆಯ ಇಬ್ಬರು ಪೊಲೀಸರ ಮೇಲೆ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಅವರ ಬಲಗೈ ಬಂಟ ರೌಡಿ ಶೀಟರ್ ಸೋಮಶೇಖರ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹುನಗುಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ಮೇಲೆ ಸಿಸಿಬಿ ಪೊಲೀಸರು ಚಾರ್ಚ್‌ಶೀಟ್ ಹಾಕಿದ್ದು, ವಿಜಾರಣೆಗೆ ಹಾಜರಾಗುವಂತೆ ಮೂರು ಬಾರಿ ಸಮನ್ಸ್ ಜಾರಿಗೊಳಿಸಲಾಗಿತ್ತು. ಆದರೆ, ಸಮನ್ಸ್‌ಗೆ ಉತ್ತರ ನೀಡದ ಕಾರಣ ವಾರಂಟ್ ಜಾರಿಗೊಳಿಸಲಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ