Select Your Language

Notifications

webdunia
webdunia
webdunia
webdunia

ಪ್ರಿನ್ಸಿಪಾಲ್ ಮೇಲೆ ಆ್ಯಸಿಡ್ ಎರಚಿ ಹಲ್ಲೆ ಯತ್ನ

Acid casting
bangalore , ಬುಧವಾರ, 30 ಮಾರ್ಚ್ 2022 (20:25 IST)
ಸಹಾಯಕ ಪ್ರಾಧ್ಯಾಪಕನೋರ್ವ ಕಾಲೇಜಿನ ಪ್ರಿನ್ಸಿಪಾಲ್ ಮೇಲೆ ಆ್ಯಸಿಡ್ ಎರಚಿ ಹಲ್ಲೆ ಮಾಡಲು ಯತ್ನಿಸಿರುವ ಘಟನೆಯೊಂದು ನಗರದಲ್ಲಿ ಬೆಳಕಿಗೆ ಬಂದಿದೆ.ಹೆಚ್‍ಕೆಇ ಸೊಸೈಟಿಯ ಫಾರ್ಮಸಿ ಕಾಲೇಜ್‍ನ ಪ್ರಿನ್ಸಿಪಾಲ್ ಡಾ.ಅರುಣ್ ಕುಮಾರ್ ಬೆನಕಳ ಮೇಲೆ ಇದೇ ಫಾರ್ಮಸಿ ಕಾಲೇಜ್‍ನ ಸಹಾಯಕ ಪ್ರಾಧ್ಯಾಪಕನಾಗಿರುವ ಶಾಂತವೀರ ಸಲಗಾರ ಆ್ಯಸಿಡ್ ಎರಚಿ ಹಲ್ಲೆಗೆ ಯತ್ನ ನಡೆಸಿದ್ದಾರೆ. ಈ ಘಟನೆ ಮಾರ್ಚ್ 21ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಡಾ ಅರುಣ್ ಕುಮಾರ್ ಬೆನಕಲ್ ಅವರನ್ನು ಪರೀವಿಕ್ಷಣಾ ಇನ್ಸಪೆಕ್ಟರ್ ಆಗಿ ನೇಮಕ ಮಾಡಲಾಗಿದ್ದು, ಶಾಂತವೀರ ಸಲಗರ ಪರೀವಿಕ್ಷಣಾ ಇನ್ಸಪೇಕ್ಟರ್ ನೇಮಕ ಆಗದ ಹಿನ್ನಲೆ ಈ ಕೃತ್ಯ ಎಸಗಲಾಗಿದೆ. ಈ ಬಗ್ಗೆ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಲ್ ಸ್ಮಿತ್ ಪರ ನಿಂತ ಕಂಗನಾ ರನೌತ್