Webdunia - Bharat's app for daily news and videos

Install App

ಹಣಕ್ಕಾಗಿ ಅಶ್ಲೀಲ ವಿಡಿಯೋ ತೋರಿಸಿ‌ ಬ್ಲಾಕ್ ಮೇಲ್- 30 ಲಕ್ಷಕ್ಕೆ ಬೇಡಿಕೆ ಇಟ್ಟಿದ ಆರೋಪಿ‌ ಅಂದರ್

Webdunia
ಮಂಗಳವಾರ, 25 ಅಕ್ಟೋಬರ್ 2022 (20:29 IST)
ಕೆಲ ಟಿಕ್​ ಟಾಕ್​ ಸ್ಟಾರ್​ಗಳು ಹಾಗೂ ನಟಿಯರು ಲೈವ್​ ಸ್ಟ್ರೀಮಿಂಗ್​​ ಆ್ಯಪ್​ಗಳಲ್ಲಿ ಅರೆ ನಗ್ನ ಹಾಗೂ ನಗ್ನವಾಗಿ ಕಾಣಿಸಿಕೊಳ್ಳೋ ವಿಷಯ ಹೊಸದೇನಲ್ಲ. ಇಂತಹ ಲೈವ್​ ಸ್ಟ್ರೀಮಿಂಗ್​ ಆ್ಯಪ್​ಗಳಲ್ಲಿ ಕೇವಲ ಸಬ್​ಸ್ಕ್ರೈಬರ್ಸ್​ ಮಾತ್ರ ಈ ವಿಡಿಯೋಗಳನ್ನು ನೋಡಬಹುದಾಗಿದೆ. ಹೌದು, ಕನ್ನಡದ ಖ್ಯಾತ ನಟನ ಜೊತೆ ಸಿನಿಮಾದಲ್ಲಿ ನಾಯಕಿಯಾಗಿ ತೆರೆ ಹಂಚಿಕೊಂಡಿರುವ ನಟಿಯೊಬ್ಬರು ಟ್ಯಾಂಗೊ ಎಂಬ ಆ್ಯಪ್​ನಲ್ಲಿ ತನ್ನ ಖಾತೆ ತೆರೆದು ಅರೆನಗ್ನ ವಿಡಿಯೋಗಳನ್ನ ಹಂಚಿಕೊಂಡಿದ್ದರು. ಈ ವಿಡಿಯೋಗಳನ್ನ ರೆಕಾರ್ಡ್​ ಮಾಡಿಕೊಂಡಿದ್ದ ಓರ್ವ ಆಕೆಗೆ ಅದರ ತುಣುಕು ಹಾಗೂ ಫೋಟೋಗಳನ್ನು ಕಳುಹಿಸಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಹಣ ಕೊಡದೆ ಹೋದರೆ, ಅವುಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಅಪ್​ಲೋಡ್​ ಮಾಡೋದಾಗಿ ವಾಟ್ಸ್​ಆ್ಯಪ್​ ಮೂಲಕ ಬ್ಲಾಕ್​ ಮೇಲ್​ ಮಾಡ್ತಿದ್ದ. ಈ ಸಂಬಂಧ ಆ ನಟಿ ಈಶಾನ್ಯ ವಿಭಾಗದ ಸೆನ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸ್ತಾರೆ. 
 
ಭುವನೇಶ್ವರಿ ನಗರದ ನಿವಾಸಿಯಾಗಿರುವ ಮಹಂತೇಶ್ ವೃತ್ತಿಯಲ್ಲಿ ಮೇಕಪ್​ ಮ್ಯಾನ್​. ದೂರು ನೀಡಿರುವ ನಟಿಯ ಬಳಿ ಬಹಳ ಸಮಯದಿಂದ ಮೇಕಪ್​ ಮ್ಯಾನ್​ ಆಗಿ ಕೆಲಸ ಮಾಡ್ತಿದ್ದ. ಅಷ್ಟೇ ಅಲ್ಲ ಆಕೆಯ ಹತ್ತಿರದ ಸಂಬಂಧಿಯೂ ಹೌದು. ಈ ಸಲಿಗೆಯಿಂದಲೇ ನಟಿಯ ಬಗ್ಗೆ ಈತನಿಗೆ ತುಂಬಾ ಮಾಹಿತಿ ಇತ್ತು. ಇನ್ನು ಆರೋಪಿ ನಟಿ ಲೈವ್​ ಸ್ಟ್ರೀಮಿಂಗ್​ ಆ್ಯಪ್​ನಲ್ಲಿ ಖಾತೆ ಹೊಂದಿರುವ ವಿಷಯ  ಹಾಗೂ ಈ ಖಾತೆಯ ಬಗ್ಗೆ ಮನೆಯವರಿಗೆ ಮಾಹಿತಿ ಇಲ್ಲ ಅನ್ನೋದನ್ನೂ ತಿಳಿದುಕೊಂಡಿದ್ದ. ಜೊತೆಗೆ ಆಕೆಯ ಖಾತೆಯ ಹೆಸರನ್ನು ತಿಳಿದುಕೊಂಡು ಅದರಲ್ಲಿ ಬರುವ ಆಕೆಯ ಅರೆ ನಗ್ನ ವಿಡಿಯೋಗಳನ್ನ ರೆಕಾರ್ಡ್​ ಮಾಡಿಕೊಂಡಿದ್ದ. ನಂತರ ಅವುಗಳನ್ನ ಇಟ್ಟುಕೊಂಡು ಬ್ಲಾಕ್​ ಮೇಲ್​ ಮಾಡಲು ಹೊಸ ನಂಬರ್​ ಖರೀದಿಸಿದ್ದ. ನಂತರ ವಾಟ್ಸ್​ಆ್ಯಪ್​ ಮೂಲಕ ವಿಡಿಯೋ ಹಾಗೂ ಅರೆ ನಗ್ನ ಫೋಟೋ ಕಳುಹಿಸಿ 30 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಹೊಸ ನಂಬರ್​ನಿಂದ ಬಂದ ಮೆಸೇಜ್​ ಹಾಗೂ ವಿಡಿಯೋ ನೋಡಿ ಗಾಬರಿಗೊಂಡ ನಟಿ ಪೊಲೀಸ್ರ ಮೊರೆ ಹೋಗಿದ್ದಾರೆ. 
 
ದೂರು ನೀಡಿದ ಕೂಡಲೇ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಜೊತೆಗೆ ಆರೋಪಿಯ ಮೊಬೈಲ್​ ಹಾಗೂ ಸಿಮ್​ ಕಾರ್ಡ್​ ಅನ್ನ ವಶಕ್ಕೆ ಪಡೆದುಕೊಂಡಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಲಾಲ್‌ ಬಾಗ್‌, ಕಬ್ಬನ್ ಪಾರ್ಕ್‌ನಂತಹ ಇನ್ನಷ್ಟು ಉದ್ಯಾನವನಗಳ ಅಗತ್ಯವಿದೆ: ಈಶ್ವರ್ ಖಂಡ್ರೆ

ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ವರದಿ ಬಿಡುಗಡೆಗೆ ಬಿಜೆಪಿ ಆಗ್ರಹ

ಬಿಜೆಪಿ ಶಾಸಕ ತಂದಿದ್ದ ಉಡುಗೊರೆಯನ್ನು ಪ್ರಧಾನಿ ಮೋದಿಗೆ ಕೊಟ್ಟಿದ್ದು ನಿಜಾನಾ: ಡಿಕೆಶಿ ಸ್ಪಷ್ಟನೆ

ಸೆಲ್ಫಿ ಹುಚ್ಚಾಟಕ್ಕೆ ಆನೆ ದಾಳಿಯಿಂದ ಜಸ್ಟ್ ಎಸ್ಕೇಪ್ ಆದ ಪ್ರವಾಸಿಗನಿಗೆ ಬಿತ್ತು ಭಾರೀ ದಂಡ

ಬೀದಿ ನಾಯಿ ಪರ ಟ್ವೀಟ್ ಮಾಡಿದ ಸಿದ್ದರಾಮಯ್ಯ: ಇದಕ್ಕೇನಾ ಬಿರಿಯಾನಿ ಕೊಡ್ತಿರೋದು ಎಂದ ನೆಟ್ಟಿಗರು

ಮುಂದಿನ ಸುದ್ದಿ