Publish Date: Wed, 13 Dec 2017 (10:20 IST)
Updated Date: Wed, 13 Dec 2017 (10:25 IST)
ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ತುಮಕೂರು ,ಚಿಕ್ಕಬಳ್ಳಾಪುರ, ನೆಲಮಂಗಲ, ಹಾಗು ಬಳ್ಳಾರಿಯಲ್ಲಿ ಏಕಕಾಲಕ್ಕೆ ಎಸಿಬಿಗಳು ದಾಳಿ ನಡೆಸಿದ್ದಾರೆ.
ಅಧಿಕಾರಿಗಳ ಮನೆ, ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದಾರೆ. ತುಮಕೂರಿನ ಎಸಿಬಿ ಡಿ.ವೈ.ಎಸ್.ಪಿ. ಜಿ.ಎನ್. ಮೋಹನ್ ಅವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. ತುಮಕೂರಿನ ಪಿ.ಡಬ್ಲೂ.ಡಿ. ಎಇಇ ಜಗದೀಶ್ ಮನೆ ಮೇಲೆ ದಾಳಿ ನಡೆದಿದೆ.
ಕೊರಟಗೆರೆಯಲ್ಲಿರುವ ಹಾಗು ತುಮಕೂರಿನ ಸರಸ್ವತಿ ಪುರದಲ್ಲಿರುವ ಅವರ ಮನೆ ಮೇಲು ದಾಳಿ ಮಾಡಲಾಗಿದ್ದು, ಮನೆಯಲ್ಲಿರುವ ದಾಖಲೆಗಳನ್ನುಅಧಿಕಾರಿಗಳನ್ನುಪರಿಶೀಲಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿ. ಸಣ್ಣ ನೀರಾವರಿ ಇಲಾಖೆ ಎಇಇ ಹೇಮಂತ್ ನಿವಾಸದ ಮೇಲೆ ಕೂಡ ಎಸಿಬಿಗಳು ದಾಳಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ