ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಭೇಟಿ ನೀಡಿ ರೋಗಿಗಳನ್ನ ಮಾತನಾಡಿಸಿದ್ದಾರೆ.ತದನಂತರ ಮಾಧ್ಯಮಗಳಿಗೆ ಚಂದ್ರು ಪ್ರತಿಕ್ರಿಯಿಸಿದ್ದು,ದುರ್ಘಟನೆ ಆಗಬಾರದಿತ್ತು.ಈ ಘಟನೆ ಆಕಸ್ಮಿಕವೋ, ಯೋಜನಾಬದ್ದವಾಗಿ ಆಗಿದೆಯೋ..?ಇಬ್ಬರಿಂದ ಮೂವರಿಗೆ ೪೦% ಕ್ಕಿಂತ ಹೆಚ್ಚು ಸುಟ್ಟಗಾಯವಾಗಿದೆ.ಕಿರಣ್, ಶಿವಕುಮಾರ್, ಜ್ಯೋತಿಗೆ ಹೆಚ್ಚು ಸುಟ್ಟ ಗಾಯವಾಗಿದೆ.
ಗುತ್ತಿಗೆ ವಿಚಾರದಲ್ಲಿ ಹಣಕಾಸಿನ ವಿಚಾರ ನಡೆದಿತ್ತು.ಯಾರೋ ಈ ಘಟನೆ ಮಾಡಿಸಿದ್ದಾರೆ ಅನ್ನೋ ಗುಮಾನಿಯಿದೆ.ಈ ಹಿಂದೆ ರಾಜರಾಜೇಶ್ವರಿ ನಗರದಲ್ಲಿಯೂ ಇಂತಹ ಘಟನೆ ನಡೆದಿತ್ತು.ಸಮಗ್ರ ತನಿಖೆಯಾಗಬೇಕಿದೆ.ಈ ವಿಚಾರವನ್ನ ಮುಚ್ಚಿ ಹಾಕುವ ಪ್ರಯತ್ನ ಮಾಡಬೇಡಿ.ಕಾಂಗ್ರೇಸ್ ನವ್ರು ಯಾಕೆ ಇದನ್ನ ಮಾಡಿರಬಾರದು..! ಬಾಕಿ ಬಿಲ್ ಪಾವತಿಯನ್ನ ಮಾಡಿದಿರುವ ಬಗ್ಗೆ ಅನುಮಾನಗಳಿವೆ.ಹೀಗಾಗಿ ಕಾಂಗ್ರೆಸ್ ಈ ಘಟನೆಯನ್ನ ಯಾಕೆ ಮಾಡಿರಬಾರದೆಂದು ಪ್ರಶ್ನೆ ಮಾಡಿದ್ದಾರೆ.ಅಲ್ಲದೇ ಡಿಸಿಎಂ, ೮-೧೦ ಲಕ್ಷ ಕೊಟ್ಟರೆ ಹಣ ಬಿಡುಗಡೆ ಮಾಡೋದಾಗಿ ಹೇಳಿರುವ ವಿಚಾರವೂ ಇದೆ.ಆರ್ಡರ್ ಇಲ್ಲದೇ ಕೆಲಸಗಳು
ಆಗ್ತಿವೆ.ಆರ್ಡರ್ ಇಲ್ಲದೇ ಗುತ್ತಿಗೆದಾರರು ಕೆಲಸ ಮಾಡಿರೋದು ತಪ್ಪು ಅಂತಾ ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.