ಮದುವೆಯ ಸಂಬಂಧವಿದೆ ಎಂಬ ಕಾರಣಕ್ಕೆ ಪತಿಯ ಆಧಾರ್ ದತ್ತಾಂಶವನ್ನು ಪತ್ನಿಯು ಏಕಾಏಕಿ ಪಡೆಯಲಾಗುವುದಿಲ್ಲ.ಇದು ಕಾನೂನಿನ ಅನ್ವಯ ಖಾಸಗಿ ಹಕ್ಕುಗಳ ರಕ್ಷಣಾ ನಿಯಮಗಳನ್ನು ಪಾಲನೆ ಮಾಡಲೇಬೇಕಾಗುತ್ತದೆ.ಹಾಗು ಮದುವೆ ಸಂಬಂಧ ಇದೆ ಎಂಬ ಕಾರಣಕ್ಕಾಗಿ ವ್ಯಕ್ತಿಯ ವೈಯಕ್ತಿಕ ಮಾಹಿತಿಯನ್ನು ಏಕಾಏಕಿ ಪಡೆಯಲು ಆಗುವುದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.