Webdunia - Bharat's app for daily news and videos

Install App

ʼಆವೇಶಂʼ ಸಿನಿಮಾದಂತೆ ಕಾರಿನಲ್ಲಿ ಈಜುಕೊಳ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಯೂಟ್ಯೂಬರ್

sampriya
ಬುಧವಾರ, 29 ಮೇ 2024 (19:42 IST)
photo By Youtube
ತಿರುವನಂತಪುರಂ: ಕೇರಳದ ಯೂಟ್ಯೂಬರೊಬ್ಬರು ಮಲಯಾಳಂ ಚಲನಚಿತ್ರ ಆವೇಶಂನ ದೃಶ್ಯವನ್ನು ಅನುಕರಿಸುವ ಮೂಲಕ ತಮ್ಮ ವಾಹನದಲ್ಲಿ ತಾತ್ಕಾಲಿಕ ಈಜುಕೊಳವನ್ನು ಸ್ಥಾಪಿಸಲು ಜೋಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

 
ವ್ಲಾಗರ್ ತನ್ನ ಟಾಟಾ ಸಫಾರಿ ಎಸ್‌ಯುವಿಯೊಳಗೆ ಟಾರ್ಪಾಲಿನ್ ಶೀಟ್ ಬಳಸಿ 'ಪೂಲ್' ಮಾಡಿ ಅದರಲ್ಲಿ ನೀರು ತುಂಬಿಸಿ, ಫಹಾದ್ ಫಾಸಿಲ್ ಅಭಿನಯದ ಚಿತ್ರದ ದೃಶ್ಯಗಳನ್ನು ಪ್ರದರ್ಶಿಸಿದರು. ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊದಲ್ಲಿ ಅವರು ಆಲಪ್ಪುಳದ ಜನನಿಬಿಡ ಪಟ್ಟಣದ ಮೂಲಕ ಕಾರು ಹಾದು ಹೋಗುತ್ತಿರುವಾಗ ತನ್ನ ಸ್ನೇಹಿತರೊಂದಿಗೆ ಕೊಳದಲ್ಲಿ ಆನಂದಿಸುತ್ತಿರುವುದನ್ನು ಕಾಣಬಹುದು.


ವೀಡಿಯೊ ವೈರಲ್ ಆಗುತ್ತಿದ್ದಂತೆ, MVD ಯ ಜಾರಿ ವಿಭಾಗವು ಕ್ರಮಕ್ಕೆ ಧಾವಿಸಿ ಆತನನ್ನು ಬಂಧಿಸಿತು.

ಮೋಟಾರು ವಾಹನಗಳ ಅಧಿಕಾರಿಗಳು ಹಾಗೂ ತನ್ನನ್ನು ಟೀಕಿಸಿದವರನ್ನು ಟೀಕಿಸುವ ವಿಡಿಯೋವನ್ನೂ ಪೋಸ್ಟ್ ಮಾಡಿದ್ದರು. ಜನರನ್ನು ರಂಜಿಸುವ ಪ್ರಯೋಗವಷ್ಟೇ ಮಾಡಿದ್ದು, ಅದು ಅವರ ಕೆಲಸ ಎಂದರು.

ಕೇರಳ ಮೋಟಾರು ವಾಹನ ಇಲಾಖೆ (ಎಂವಿಡಿ) ಬುಧವಾರ ವ್ಲಾಗರ್ 'ಸಂಜು ಟೆಕಿ' ವಾಹನದ ನೋಂದಣಿ ಮತ್ತು ಚಾಲಕನ ಪರವಾನಗಿಯನ್ನು ಅಮಾನತುಗೊಳಿಸಲು ನಿರ್ಧರಿಸಿದೆ. ಕಾರಿನಲ್ಲಿರುವ ವ್ಲಾಗರ್ ಮತ್ತು ಇತರರನ್ನು ಅಲಪ್ಪುಳ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸಾಮಾಜಿಕ ಸೇವೆ ಮಾಡಲು ಮತ್ತು ರಸ್ತೆ ನಿಯಮಗಳ ಕುರಿತು ತರಬೇತಿಗೆ ಹಾಜರಾಗಲು ಕೇಳಲಾಗುತ್ತದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments