ಪಾರ್ಕ್‌ನಲ್ಲಿ ಕೂತಿದ್ದ ಯುವತಿಯನ್ನು ಹೊತ್ತೊಯ್ದು 8 ಗಂಟೆ ಗ್ಯಾಂಗ್‌ರೇಪ್!

Webdunia
ಶುಕ್ರವಾರ, 31 ಮಾರ್ಚ್ 2023 (12:33 IST)
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ಹುಡುಗಿಯರಿಗೆ ಸೇಫ್ ಅಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ. ಸಿಲಿಕಾನ್ ಸಿಟಿಯ ಹೃದಯ ಭಾಗದಲ್ಲಿ ಜನರ ಓಡಾಟದ ನಡುವೆಯೇ ಯುವತಿಯನ್ನು ಹೊತ್ತೊಯ್ದು ದುರಳರ ಗ್ಯಾಂಗ್ ರಾತ್ರಿ ಕಾರಿನಲ್ಲಿ ಅತ್ಯಾಚಾರ ಎಸಗಿ ಮುಂಜಾನೆ ರಸ್ತೆ ನಡುವೆ ಬಿಟ್ಟು ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
 
ವರದಿಗಳ ಪ್ರಕಾರ ಮಾರ್ಚ್ 25 ರಂದು ಯುವತಿ ತನ್ನ ಸ್ನೇಹಿತನ ಜೊತೆ ನ್ಯಾಷಲ್ ಗೇಮ್ಸ್ ವಿಲೇಜ್ ಕಾಂಪ್ಲೆಕ್ಸ್ ಪಾರ್ಕ್ನಲ್ಲಿ ಕೂತು ಮಾತನಾಡುತ್ತಿದ್ದಳು. ಆಗ ಕಾಮುಕರ ಗ್ಯಾಂಗ್ ಪಾರ್ಕ್ ಬಳಿ ಪ್ರತ್ಯಕ್ಷವಾಗಿ ಕಿರಿಕ್ ಮಾಡಿದ್ದಾರೆ. ಬಳಿಕ ಆರೋಪಿಗಳು ಯುವತಿಯನ್ನು ಹೊತ್ತೊಯ್ದು ಮಾರುತಿ 800 ಕಾರಿನಲ್ಲಿ ಸುಮಾರು 8 ಗಂಟೆಗಳ ಕಾಲ ಸುತ್ತಾಡಿಸಿ, ನಿರಂತರವಾಗಿ ಅತ್ಯಾಚಾರ ಮಾಡಿದ್ದಾರೆ. ಕಾಮಾಂದರ ಕ್ರೌರ್ಯಕ್ಕೆ ಕಾರಿನ ಸೀಟ್ ಕೂಡ ಚಿಂದಿ ಚಿಂದಿಯಾಗಿದೆ.

ಕೋರಮಂಗಲದ ಎನ್ಜಿವಿ ಕಾಂಪ್ಲೆಕ್ಸ್ ಪಾರ್ಕ್ನಿಂದ ಹೊರಟ ಕಾಮುಕರು ದೋಮ್ಮಲೂರು, ಇಂದಿರಾನಗರ, ಅನೇಕಲ್, ನೈಸ್ ರೋಡ್ ಹೀಗೆ 60 ಕಿ.ಮೀ ಸುತ್ತಾಡಿ, ದಾರಿ ಉದ್ದಕ್ಕೂ ಸಂತ್ರಸ್ತೆಯ ಮೇಲೆ ಒಬ್ಬರಾದ ಮೇಲೆ ಒಬ್ಬರು ಅತ್ಯಾಚಾರ ಮಾಡಿದ್ದಾರೆ. ಸತತ 8 ಗಂಟೆಗಳ ಕಾಲ ಕಾಮುಕರ ಅಟ್ಟಹಾಸಕ್ಕೆ ತುತ್ತಾಗಿರುವ ಸಂತ್ರಸ್ತೆ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೆಡ್ ರೆಸ್ಟ್ನಲ್ಲಿದ್ದಾಳೆ ಎನ್ನಲಾಗಿದೆ. 

ಘಟನೆಯಾಗಿ 2 ದಿನದ ಬಳಿಕ ಯುವತಿ ಸುಧಾರಿಸಿಕೊಂಡು ಕೋರಮಂಗಲ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸಂತ್ರಸ್ತ ಯುವತಿ ಕೊಟ್ಟ ದೂರಿನ ಆಧಾರದ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದೇ ಗುರುವಾರ, ಶುಕ್ರವಾರ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸಿಗಲ್ಲ

ಬೆಳಗಾವಿ ಕೃಷ್ಣಮೃಗ ಸಾವು ಪ್ರಕರಣ, ಬಂತು ಪ್ರಯೋಗಾಲಯದ ವರದಿ

60 ಅಡಿ ಆಳದ ಕಾಲುವೆಗೆ ಬಿದ್ದ ಕಾಡಾನೆ, ಕಾರ್ಯಚರಣೆ ಹೇಗೆ ನಡೆದಿತ್ತು ಗೊತ್ತಾ

ಸಹಾಯ ಕೇಳಲು ಬಂದ ಯುವತಿಗೆ ಲೈಂಗಿಕ ದೌರ್ಜನ್ಯ, ಕೋರ್ಟ್‌ಗೆ ಹಾಜರಾಗಲು ಬಿಎಸ್‌ವೈಗೆ ಸಮನ್ಸ್‌

ಸೂಸೈಡ್ ಬಾಂಬರ್ ದಾರಿ ತಪ್ಪಿದ ಮಗ: ಕಾಂಗ್ರೆಸ್ ಸಂಸದನ ಹೇಳಿಕೆ ಕೇಳಿದ್ರೆ ಶಾಕ್

ಮುಂದಿನ ಸುದ್ದಿ
Show comments