ಅದು ಕೇಂದ್ರ ಗೃಹ ಸಚಿವ ಅಮಿತ್ ಶಾ ತೆರಳುತ್ತಿದ್ದ ರಸ್ತೆ.ರಸ್ತೆಯುದ್ದಕ್ಕೂ ಪೊಲೀಸ್ ಸರ್ಪಗಾವಲೇ ನೆರೆದಿತ್ತು.ಹೆಜ್ಜೆ ಹೆಜ್ಜೆಗೂ ಖಾಕಿ ಕಟ್ಟೆಚ್ಚರ ವಹಿಸಿತ್ತು.ಅಪ್ಪಿ ತಪ್ಪಿಯೂ ಯಾರು ಅಡ್ಡ ಬರೋಹಾಗಿಲ್ಲ.ಈ ಮಧ್ಯೆ ಬೈಕ್ ಸವಾರನೊಬ್ಬ ಉಪಟಳ ಮೆರೆದಿದ್ದ.ಕಾನ್ವೆ ವಾಹನಕ್ಕೆ ಅಡ್ಡಲಾಗಿ ನುಗ್ಗಿ ಆತಂಕ ಸೃಷ್ಟಿ ಮಾಡಿದ್ದ..ಬೆಂಗಳೂರು ಪೊಲೀಸರ ಭದ್ರತಾ ವೈಫಲ್ಯ ಸಾಕಷ್ಟು ಚರ್ಚೆ ಆಗ್ತಿದೆ.ಸಿಸಿಟಿವಿ ದೃಶ್ಯ ನೋಡಿ..ರಸ್ತೆಯುದ್ದಕ್ಕೂ ಪೊಲೀಸರೇ ತುಂಬಿದ್ದಾರೆ..ಒಂದೇ ಒಂದು ವಾಹನ ಕೂಡ ಹೋಗದಂತೆ ಕಾಯ್ತಿದ್ದಾರೆ..ಆದರೆ ಇದ್ದಕ್ಕಿದ್ದಂತೆ ಎಲ್ಲರಲ್ಲೂ ಗಾಬರಿ..ಏನ್ ಮಾಡ್ಬೇಕೋ ಗೊತ್ತಾಗ್ತಿಲ್ಲ..ಅಮಿತ್ ಶಾ ಕಾನ್ವೆ ಜೊತೆಗೆ ಬಂದ ಬೈಕ್ ಸವಾರ ದೊಡ್ಡ ಮಟ್ಟದ ಆತಂಕವನ್ನೇ ಸೃಷ್ಟಿ ಮಾಡಿಬಿಟ್ಟಿದ್ರು.
ಸಿಸಿಟಿವಿ ದೃಶ್ಯ ನೋಡಿ..ರಸ್ತೆಯುದ್ದಕ್ಕೂ ಪೊಲೀಸರೇ ತುಂಬಿದ್ದಾರೆ..ಒಂದೇ ಒಂದು ವಾಹನ ಕೂಡ ಹೋಗದಂತೆ ಕಾಯ್ತಿದ್ದಾರೆ..ಆದರೆ ಇದ್ದಕ್ಕಿದ್ದಂತೆ ಎಲ್ಲರಲ್ಲೂ ಗಾಬರಿ..ಏನ್ ಮಾಡ್ಬೇಕೋ ಗೊತ್ತಾಗ್ತಿಲ್ಲ..ಅಮಿತ್ ಶಾ ಕಾನ್ವೆ ಜೊತೆಗೆ ಬಂದ ಬೈಕ್ ಸವಾರ ದೊಡ್ಡ ಮಟ್ಟದ ಆತಂಕವನ್ನೇ ಸೃಷ್ಟಿ ಮಾಡಿಬಿಟ್ಟಿದ್ರು.ಇನ್ನೇನು ಕರ್ನಾಟಕ ಚುನಾವಣೆ ಸಮೀಪಿಸ್ತಿದೆ..ಮೋದಿ ಅಮಿತ್ ಶಾ ಸೇರಿದಂತೆ ಘಟಾನುಘಟಿ ಕೇಂದ್ರ ನಾಯಕರೇ ರಾಜ್ಯಕ್ಕೆ ಲಗ್ಗೆ ಇಡ್ತಿದ್ದಾರೆ.ಈ ಮಧ್ಯೆ ನಾಯಕರ ಭದ್ರತೆಯಲ್ಲಿ ವೈಫಲ್ಯ ಕಂಡುಬರ್ತಿದ್ದು,ಆತಂಕ ಸೃಷ್ಟಿ ಮಾಡ್ತಿದೆ.ನಿನ್ನೆ ಆಗಿದ್ದೂ ಕೂಡ ಅದೇ..ಮಾರ್ಚ್ 26 ಕಾರ್ಯಕ್ರಮ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದ ಅಮಿತ್ ಶಾ ರಾತ್ರಿ 10.30 ರ ಸುಮಾರಿಗೆ ವಾಪಸ್ಸಾಗ್ತಿದ್ರು.ತಾಜ್ ವೆಸ್ಟ್ ಎಂಡ್ ಹೋಟೆಲ್ ನಿಂದ ಹೆಚ್ ಎಲ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ರು.ಈ ಮಧ್ಯೆ ನಗರ ಕಬ್ಬನ್ ರಸ್ತೆ ಬಳಿ ಸುಜುಕಿ ಆ್ಯಕ್ಸಿಸ್ ಬೈಕ್ ನಲ್ಲಿ ಬಂದ ಇಮ್ರಾನ್ ಮತ್ತು ಜಿಬ್ರಾನ್ ಎಂಬ ಬೈಕ್ ಸವಾರರಿಬ್ಬರು ಪೊಲೀಸರನ್ನು ಕೂಡ ಲೆಕ್ಕಿಸದೆ ಅಮಿತ್ ಕಾನ್ವೆ ವಾಹನಕ್ಕೆ ಅಡ್ಡಲಾಗಿ ಬಂದಿದ್ದಾರೆ.ಅಲ್ಲಿಂದ 300 ಮೀ ಅಂದ್ರೆ ಮಣಿಪಾಲ್ ಸೆಂಟರ್ ಸಿಗ್ನಲ್ ವರೆಗೆ ಕಾನ್ವೆ ಜೊತೆಯಲ್ಲಿ ತೆರಳಿದ್ದಾರೆ.ಅಮಿತ್ ಶಾ ಮತ್ತು ಬೆಂಗಾವಲು ವಾಹನ ಬಲಕ್ಕೆ ತಿರುವು ಪಡೆದು ತೆರಳಿದ್ರೆ ಬೈಕ್ ಸವಾರರಿಬ್ಬರು ಎಡಕ್ಕೆ ತಿರುವು ಪಡೆದಿದ್ದು ಪೊಲೀಸರ ಕೈಗೆ ಲಾಕ್ ಆಗಿದ್ದಾರೆ.
ಪೊಲೀಸರು ತಕ್ಷಣಕ್ಕೆ ಹಿಂಬದಿ ಸವಾರನನ್ನ ಲಾಕ್ ಮಾಡಿದ್ರೆ ಬೈಕ್ ಸವಾರ ಮಾತ್ರ ಪರಾರಿಯಾಗಿದ್ದ.ಹಿಂಬದಿ ಸವಾರನ ಮಾಹಿತಿ ಮೇರೆಗೆ ಭಾರತಿನಗರ ಮತ್ತು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಕಾರ್ಯಾಚರಣೆ ನಡೆಸಿ ಬೈಕ್ ಸವಾರರನ್ನು ವಶಕ್ಕೆ ಪಡೆದಿದ್ದಾರೆ.ಘಟನೆ ಸಂಬಂಧ ಎಫ್ಐಆರ್ ದಾಖಲಿಸಿಕೊಂಡ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.ವಿವಾರಣೆ ವೇಳೆ ಇಮ್ರಾನ್ ಮತ್ತೆ ಜಿಬ್ರಾನ್ ನೀಲಸಂದ್ರ ನಿವಾಸಿಗಳಾಗಿದ್ದು, ಆರ್.ಟಿ.ನಗರ ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಅನ್ನೋದು ಗೊತ್ತಾಗಿದೆ.ರಾತ್ರಿ ವೇಳೆ ಬೈಕ್ ಒಂದನ್ನ ಫ್ರೇಜರ್ ಟೌನ್ ನಲ್ಲಿ ರಿಪೇರಿಗೆ ಬಿಟ್ಟು ವಾಪಸ್ಸು ಮನೆಗೆ ತೆರಳುವಾಗ..ಒನ್ ವೇ ನಲ್ಲಿ ಬಂದಿದ್ದಾರೆ.ಆದರೆ ಅಮಿತ್ ಶಾ ತೆರಳುತ್ತಿರುವ ಮಾಹಿತಿ ಗೊತ್ತಿರೋದಿಲ್ಲ..ಪೊಲೀಸರು ತಡೆಯಲು ಮುಂದಾದಾಗ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾನ್ವೆ ವಾಹನದ ಜೊತೆಗೆ ಹೋಗಿದ್ದಾರೆ ಅನ್ನೋದು ಗೊತ್ತಾಗಿದೆ.
ಅದೇನೇ ಹೇಳಿ ಕೇಂದ್ರ ಗೃಹ ಸಚಿವರ ಭದ್ರತಾ ವಿಚಾರದಲ್ಲಿ ವೈಫಲ್ಯ ಆಗಿರೋದನ್ನ ಪೊಲೀಸರೇ ಒಪ್ಪಿಕೊಂಡಿದ್ದಾರೆ.ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ನಡೆಯದೇ ಇರೋದು ನಿಟ್ಟುಸಿರು ಬಿಟ್ಟಂತಾಗಿದೆ.ಐಪಿಸಿ 353 ಅಂದರೆ ಸರ್ಕಾರಿ ನೌಕರ ಕರ್ತವ್ಯಕ್ಕೆ ಅಡ್ಡಿ ಐಪಿಸಿ 279 ಅಂದ್ರೆ ಅಜಾಗರೂಕತೆಯಿಂದ ವಾಹನ ಚಾಲನೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ..ಆರೋಪಿಗಳಿಬ್ಬರನ್ನು ಸ್ಟೇಷನ್ ಬೇಲ್ ನೀಡಿ ಬಿಟ್ಟುಕಳುಹಿಸಿದ್ದಾರೆ.