Select Your Language

Notifications

webdunia
webdunia
webdunia
webdunia

ನಡುರಸ್ತೆಯಲ್ಲಿ ಯುವತಿ ಬಟ್ಟೆ ಎಳೆದಾಡಿ ಕಿರುಕುಳ

road
bangalore , ಸೋಮವಾರ, 13 ನವೆಂಬರ್ 2023 (16:50 IST)
ನಗರದ ಡಿಸಿಪಿ ಕಚೇರಿ ಎದುರಲ್ಲೆ  ಯುವತಿ ಮೇಲೆ ದೌರ್ಜನ್ಯ ನಡೆದಿದೆ.ದಕ್ಷಿಣ ವಿಭಾಗ ಡಿಸಿಪಿ ಕಚೇರಿ ಎದುರಲ್ಲರೆ ಯುವತಿಗೆ ಕಿರುಕುಳ ಕೊಡಲಾಗಿದೆ.ಬೈಕ್ ನಲ್ಲಿ ಬಂದ ಕಿಡಿಗೇಡಿ ಯುವಕನಿಂದ ಕೃತ್ಯ ನಡೆದಿದೆ.ನವೆಂಬರ್ ಆರರಂದು ಘಟನೆ ನಡೆದಿದ್ದು, ತಡವಾಗಿ ಯುವತಿ ದೂರು ದಾಖಲಿಸಿದ್ದಾಳೆ.ರಾತ್ರಿ 10.40ರ ಸುಮಾರಿಗೆ ಕೆಲಸ ಮುಗಿಸಿ ಯುವತಿ ಮನೆಗೆ ತೆರಳುತ್ತಿದ್ದಳು.ಈ ವೇಳೆ ಬೈಕ್ ನಲ್ಲಿ ಯುವತಿಯನ್ನ ಪಾಲೋ ಮಾಡಿ  ಕಿಡಿಗೇಡಿ ಯುವಕ‌ ಬಂದಿದ್ದಾನೆ.

ಸೌತ್ ಎಂಡ್ ಸರ್ಕಲ್ ಡಿಸಿಪಿ ಕಚೇರಿ ಮುಂದೆ ಯುವತಿಗೆ ಕಿರುಕುಳ ಕೊಟ್ಟಿದ್ದಾನೆ.ರಸ್ತೆಯಲ್ಲಿ ಯುವತಿ ಬಟ್ಟೆ ಎಳೆದಾಡಿ ಅಶ್ಲೀಲವಾಗಿ ನಿಂದನೆ ಮಾಡಿದ್ದಾನೆ.ನಂತರ ಬೈಕ್ ಯೂಟರ್ನ್ ತೆಗೆದುಕೊಂಡು ಅಸಾಮಿ ಎಸ್ಕೇಪ್ ಆಗಿದ್ದಾನೆ.ಈ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನ ಯುವತಿ ದಾಖಲಿಸಿದ್ದಾಳೆ.ಪ್ರಕರಣ ದಾಖಲಿಸಿ ಕಿಡಿಗೇಡಿ ಯುವಕನಿಗೆ ಪೊಲೀಸರು ಶೋಧ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ದಿನಗಳಲ್ಲಿ ಒಟ್ಟಾಗಿ ಹೋರಾಟ ಮಾಡುತ್ತೇವೆ-ಸಂಸದ ಪ್ರಜ್ವಲ್ ರೇವಣ್ಣ