Select Your Language

Notifications

webdunia
webdunia
webdunia
webdunia

ಶವದ ಮೇಲೆ ಗ್ಯಾಂಗ್‌ರೇಪ್ ಎಸಗಿದ ಕಾಮುಕರು

women
gajiabad , ಸೋಮವಾರ, 13 ನವೆಂಬರ್ 2023 (12:16 IST)
ಮಹಿಳೆ ಪ್ರಸವದ ಸಮಯದಲ್ಲಿ ಸಹಿಸಲಾಗದ ನೋವಿನಿಂದಾಗಿ ಅಸುನೀಗಿದ್ದಳು. ವರದಿಗಳ ಪ್ರಕಾರ ಆಕೆಯನ್ನು ಸಮಾಧಿ ಮಾಡಿದ ಸ್ವಲ್ಪ ಹೊತ್ತಿನಲ್ಲಿ ಶವವನ್ನು ಮೇಲಕೆತ್ತಿದ ದುರುಳರು ರಾತ್ರಿ ಸಮಯದಲ್ಲಿ  ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.  ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. 
 
ಕಾಮುಕತೆ ಪೈಶಾಚಿಕ ರೂಪ ತಾಳಿ ಹೇಗೆ ಮೆರೆದಾಡುತ್ತಿದೆ ಎನ್ನುವುದಕ್ಕೆ ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಪದೇ ಪದೇ ಬೆಳಕಿಗೆ ಬರುತ್ತಿರುವ ಅಮಾನುಷ ಘಟನೆಗಳೇ ಸಾಕ್ಷಿಯಾಗುತ್ತಿವೆ. ಹಸುಳೆಯರ ಮೇಲೆ ಗ್ಯಾಂಗ್ ರೇಪ್ ಎಸೆದ ಘಟನೆಗಳು ಕಳೆದ ವಾರವಷ್ಟೇ ದೆಹಲಿಯನ್ನು ಬೆಚ್ಚಿ ಬೀಳಿಸಿದ್ದೆವು. 
 
ಈಗ ಮತ್ತೊಂದು ಹೇಯ, ವಿಲಕ್ಷಣ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಬೆಳಕಿಗೆ ಬಂದಿದ್ದು, 26 ವರ್ಷದ ಮೃತ ಮಹಿಳೆಯ ಶವವನ್ನು ಸಮಾಧಿಯಿಂದ ಹೊರ ತೆಗೆದ ಮೂವರು ಕೀಚಕರು ಶವದ ಮೇಲೆ ಅತ್ಯಾಚಾರವೆಸಗಿದ್ದಾರೆ.
 
ಮಹಿಳೆಯನ್ನು ಸಮಾಧಿ ಮಾಡಲಾಗಿದ್ದ 10 ಅಡಿ ಅಂತರದಲ್ಲಿ ಆಕೆಯ ಶವ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು ಪ್ರಕರಣವನ್ನು ದಾಖಲಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಗೆ ಅತ್ಯಾಚಾರದ ವಿಡಿಯೋ ತೋರಿಸಿ 2 ವರ್ಷ ಕಾಲ ನಿರಂತರ ರೇಪ್