Select Your Language

Notifications

webdunia
webdunia
webdunia
webdunia

ಸಂತ್ರಸ್ಥರ ನೆರವಿಗೆ ಮುಂದಾದ ಯುವ ಜನಾಂಗ

ಸಂತ್ರಸ್ಥರ ನೆರವಿಗೆ ಮುಂದಾದ ಯುವ ಜನಾಂಗ
ಚಿಕ್ಕಬಳ್ಳಾಪುರ , ಮಂಗಳವಾರ, 21 ಆಗಸ್ಟ್ 2018 (16:13 IST)
ಕರಾವಳಿಯಲ್ಲಿ ನೆರೆ ಹಾವಳಿಗೆ ತುತ್ತಾದ ಕೊಡಗು ಜಿಲ್ಲೆಯ ಸಂತ್ರಸ್ಥರಿಗಾಗಿ ರಾಜ್ಯದ ವಿವಿಧೆಡೆಯ ಜನರು ಮಿಡಿಯುತ್ತಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಹಲವಾರು ಯುವಕರು ರೋಡಿನಲ್ಲಿ ದೇಣಿಗೆ ಎತ್ತಿ ಹಣ ಸಂಗ್ರಹಿಸಿ ಮಾನವೀಯತೆ ಮೆರೆದಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಹೆಚ್ ಕ್ರಾಸ್ ನಲ್ಲಿ‌  ಯುವಕರಿಂದ ದೇಣಿಗೆ ಸಂಗ್ರಹ ಕಾರ್ಯ ನಡೆಯಿತು.

50 ಸಾವಿರಗಿಂತಲೂ ಹೆಚ್ಚಿನ ನಗದು ದೇಣಿಗೆ ಸಂಗ್ರಹ ಮಾಡಿದರು. ಪಾತ್ರೆ ಸಾಮಾನು, ಬಿಸ್ಕಟ್, ಚಿಪ್ಸ್, ಹಾಲು ಪಾಕೆಟ್, ವಾಟರ್ ಬಾಟಲ್, ತರಕಾರಿ  ಮತ್ತು   ಹಣ್ಣು ಹಂಪಲು, ವಸ್ತ್ರ, ಉಡುಪುಗಳು,  ಕಂಬಳಿ‌, ಬೆಡ್ಶೀಟ್ , ಮೆಡಿಕಲ್ ಸ್ಟೋರ ಗಳಿಂದ ಮೆಡಿಸಿನ್ಸ್ ಸೇರಿದಂತೆ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿದರು. ಸಂಗ್ರಹಿಸಿದ  ವಸ್ತುಗಳನ್ನು ಸಂತ್ರಸ್ಥರ ನಿಧಿ ಸೇವಾ ಭಾರತಿಗೆ ಕಳಿಹಿಸಲಾಯಿತು.   

ಸರ್ಕಾರಿ ಬಸ್ ನಿಲ್ದಾಣ, ಟಿ.ಬಿ ರಸ್ತೆ, ಅಶೋಕ ರಸ್ತೆ,  ಹೆಚ್ ಕ್ರಾಸ್ ನಲ್ಲಿ  ದೇಣಿಗೆ ಸಂಗ್ರಹ ಮಾಡಲಾಯಿತು.



Share this Story:

Follow Webdunia kannada

ಮುಂದಿನ ಸುದ್ದಿ

ಎಚ್ಚರಿಕೆ ! ವಯರ್‌ಲೆಸ್ ಬ್ಲೂಟೂಥ್ ಹೆಡ್ ಫೋನ್ ಬಳಸುವ ಮುನ್ನ ಇದನೊಮ್ಮೆ ಓದಿ