Select Your Language

Notifications

webdunia
webdunia
webdunia
webdunia

ಎಚ್ಚರಿಕೆ ! ವಯರ್‌ಲೆಸ್ ಬ್ಲೂಟೂಥ್ ಹೆಡ್ ಫೋನ್ ಬಳಸುವ ಮುನ್ನ ಇದನೊಮ್ಮೆ ಓದಿ

ಎಚ್ಚರಿಕೆ ! ವಯರ್‌ಲೆಸ್ ಬ್ಲೂಟೂಥ್ ಹೆಡ್ ಫೋನ್ ಬಳಸುವ ಮುನ್ನ ಇದನೊಮ್ಮೆ ಓದಿ
ರಿಯಾದ್ , ಮಂಗಳವಾರ, 21 ಆಗಸ್ಟ್ 2018 (15:22 IST)
ರಿಯಾದ್ : ವಯರ್‌ಲೆಸ್ ಬ್ಲೂಟೂಥ್ ಹೆಡ್ ಫೋನುಗಳನ್ನು ಬಳಸಿದರೆ ನಿದ್ದೆ ಸಮಸ್ಯೆ, ಕಿವುಡುತನ ಹಾಗೂ ಮೆದುಳಿನ ಕ್ಯಾನ್ಸರಿಗೂ ಕಾರಣವಾಗಬಹುದೆಂದು ಬರೀನ್ ಇಂಟರ್ ನ್ಯಾಷನಲ್ ಹಾಸ್ಪಿಟಲ್ ನ ತಜ್ಞ ವೈದ್ಯರೊಬ್ಬರು ಹೇಳಿದ್ದಾರೆ.


ವಯರ್‌ಲೆಸ್ ಬ್ಲೂಟೂಥ್ ಹೆಡ್ ಫೋನುಗಳು ಆರೋಗ್ಯಕ್ಕೆ ತೀವ್ರ ಹಾನಿಕರವಾಗಿದ್ದು, ದಿನವೊಂದಕ್ಕೆ ಅಗತ್ಯ ಬಿದ್ದರೆ ಒಂದು ಅಥವಾ ಎರಡು ನಿಮಿಷಕ್ಕಿಂತಲೂ ಹೆಚ್ಚು ಸಮಯ ಉಪಯೋಗಿಸಬಾರದು ಮತ್ತು ಉಪಯೋಗಿಸಿದ ಕೂಡಲೇ ಅದನ್ನು ಕಿವಿಯಿಂದ ತೆಗೆಯಬೇಕು ಎಂದು ಬರೀನ್ ಇಂಟರ್ ನ್ಯಾಷನಲ್ ಹಾಸ್ಪಿಟಲ್ ವೈದ್ಯ ಡಾ. ನಾಸಿರ್ ನವಾಸ್ರೆಹ್ ಸಲಹೆ ನೀಡಿದ್ದಾರೆ.


ಸಂಶೋಧನೆಗಳ ಮೂಲಕ ಈ ಜನಪ್ರಿಯ ಸಾಧನದ ಉಪಯೋಗದಿಂದ ಮೆದುಳಿನ ಕ್ಯಾನ್ಸರ್ ಉಂಟಾಗಬಹುದೆಂದು ಕಂಡುಹಿಡಿಯಲಾಗಿದೆ. ಹಾಗೇ ಈ ಬ್ಲೂಟೂಥ್ ಹೆಡ್ ಫೋನುಗಳು ಮೈಕ್ರೋವೇವ್ ನಂತಹದೇ ತರಂಗಗಳಿಂದ ಕಾರ್ಯನಿರ್ವಹಿಸುತ್ತಿದ್ದು, ವಸ್ತುಶಃ ಮಾನವನ ಮೆದುಳನ್ನು ಬೇಯಿಸುತ್ತದೆ ಎಂಬ ಶಾಕಿಂಗ್ ವಿಚಾರವನ್ನು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗ್ರಾಹಕರಿಗಾಗಿ 47 ರುಪಾಯಿಗಳ ಪಾಕೆಟ್ ಫ್ರೆಂಡ್ಲಿ ಪ್ರೀಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿದ ಏರ್ಟೆಲ್