Select Your Language

Notifications

webdunia
webdunia
webdunia
webdunia

ರೀಲ್ಸ್​ ಮಾಡಲು ಹೋಗಿ ಪ್ರಾಣ ಬಿಟ್ಟ ಯುವಕ

A young man who died after going to make reels
ಕೊಲ್ಲೂರು , ಸೋಮವಾರ, 24 ಜುಲೈ 2023 (21:16 IST)
ಯುವಕನೊಬ್ಬ ರೀಲ್ಸ್ ಮಾಡಲು ಹೋಗಿ ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಬಳಿ ನಡೆದಿದೆ. ಅರಶಿನಗುಂಡಿ ಜಲಪಾತದ ಬಳಿ ರೀಲ್ಸ್ ಮಾಡುತ್ತಿದ್ದ ವ್ಯಕ್ತಿ ಕಾಲು ಜಾರಿ ಬಿದ್ದು ಜೀವ ಕಳೆದುಕೊಂಡಿದ್ದಾನೆ. ಭದ್ರಾವತಿ ಮೂಲದ ಶರತ್ ಕುಮಾರ್ ಮೃತಪಟ್ಟ ಯುವಕನಾಗಿದ್ದು, ಅರಶಿನಗುಂಡಿ ಜಲಪಾತ ವೀಕ್ಷಣೆಗೆ ಬಂದಿದ್ದಾಗ ಈ ದುರಂತ ನಡೆದಿದ್ದು, ಯುವಕ ಜಲಪಾತದಲ್ಲಿ ಬೀಳುತ್ತಿರುವ ದೃಶ್ಯ ಮತ್ತೊರ್ವ ಯುವಕನ ಮೊಬೈಲ್​​​ನಲ್ಲಿ ಸೆರೆಯಾಗಿದೆ. ಇನ್ನು ಯುವಕನ ಮೃತದೇಹದ ಪತ್ತೆಗೆ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸುತ್ತಿದ್ದು, ಘಟನಾ ಸ್ಥಳಕ್ಕೆ ಕೊಲ್ಲೂರು PSI ಜಯಲಕ್ಷ್ಮಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಂದ್ರಚೂಡ್ ವಿರುದ್ಧ ಸೂರಪ್ಪ ಬಾಬು ಫೈರ್