Publish Date: Mon, 24 Jul 2023 (20:46 IST)
Updated Date: Mon, 24 Jul 2023 (20:09 IST)
ಯೂಟ್ಯೂಬ್ನಲ್ಲಿ ಹರಿದಾಡಿದ ವಿಷಯದ ಬಗ್ಗೆ ಸ್ಪಷ್ಟನೆ ನಿರ್ಮಾಪಕ ಸೂರಪ್ಪ ಬಾಬು ಸ್ಪಷ್ಟನೆ ನೀಡಿದ್ದಾರೆ. ತಮ್ಮ ವಿರುದ್ಧ ಅವಹೇಳನಕಾರಿ ಮಾತನಾಡಿದ ಚಕ್ರವರ್ತಿ ಚಂದ್ರಚೂಡ್ ವಿರುದ್ಧ ನಿರ್ಮಾಪಕ ಸೂರಪ್ಪ ಬಾಬು ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ”ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆ ಮಾತನಾಡಲು ಅವನಿಗೇನು ಹಕ್ಕಿದೆ. ಯಾವುದೇ ಹಕ್ಕಿಲ್ಲದೇ ನನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಾರೆ, ನಾನು ಉತ್ತರ ಕೊಡಬೇಕಾಗಿರೋದು ನನಗೆ ಹಣ ಕೊಟ್ಟವರಿಗೆ ಹಾಗು ನನ್ನ ಮನೆಯವರಿಗೆ. ಸತ್ಯ ಹರಿಶ್ಚಂದ್ರನ ತುಂಡು ಅಂತ ಅಂದ್ಕೊಂಡಿದ್ದಾರಾ, ನನ್ನ ಶಿಖಂಡಿ ಅಂತ ಹೇಳ್ತಿದ್ದಾರೆ ಎಂದು ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಸೂರಪ್ಪ ಬಾಬು ಅಬ್ಬರಿಸಿದ್ದಾರೆ. ”ಯಾವ ನಟರಿಗೆ ಅನ್ಯಾಯ ಮಾಡಿದ್ದೀನಿ
ತಾಕತ್ ಇದ್ದರೆ ಹೆಸರು ಬಹಿರಂಗಗೊಳಿಸಲಿ. ಹೆಸರು ಮುಚ್ಚಿಟ್ಟು ಮಾತನಾಡುವುದರಲ್ಲಿ ಏನಿದೆ ಎಂದು ಕಿಡಿಕಾರಿದ್ರು.