Publish Date: Sun, 06 Feb 2022 (09:36 IST)
Updated Date: Sun, 06 Feb 2022 (11:39 IST)
ಬೆಂಗಳೂರು : ಪೋಷಕರು ಬೈದಿದಕ್ಕೆ ಯುವಕ ಮನೆ ಬಿಟ್ಟು ಹೋಗಿರುವ ಘಟನೆ ನಡೆದಿದೆ.
ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆಗಿದಕ್ಕೆ ಪೋಷಕರು ಮಗನಿಗೆ ಬೈದಿದ್ದಾರೆ. ಇದಕ್ಕೆ ಪತ್ರ ಬರೆದು ಮನೆ ಬಿಟ್ಟು ಹೋಗಿದ್ದಾನೆ. ನನ್ನ ಹುಡುಕಬೇಡಿ ಎಂದು ಪತ್ರದಲ್ಲಿ ಹೇಳಿದ್ದಾನೆ.
ಬಿಲ್ಡರ್ ಮಂಜುನಾಥ್ ಎಂಬುವವರ ಪುತ್ರ ವಿಶಾಲ್ ಎಂಬಾತ ಮನೆ ಬಿಟ್ಟು ಹೋಗಿರುವ ಯುವಕ. ವಿಶಾಲ್ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದಿದ್ದ. ಆದರೆ ಪರೀಕ್ಷೆಯಲ್ಲಿ ಎರಡು ವಿಷಯಗಳಲ್ಲಿ ಫೇಲ್ ಆಗಿದ್ದಾನೆ. ಹೀಗಾಗಿ ಮನೆಯವರು ಬೈದಿದ್ದಾರೆ ಎಂದು ತಿಳಿದುಬಂದಿದೆ.
5,000 ಸಾವಿರ ರೂ. ಹಣ ತೆಗೆದುಕೊಂಡು ಮಗ ವಿಶಾಲ್ ಮನೆ ಬಿಟ್ಟು ಹೋಗಿದ್ದಾನೆ. ನಿನ್ನೆ (ಫೆ.05) ಸಂಜೆ ಹೊಂಡಾ ಆಕ್ಟಿವ್ ಬೈಕ್ ತೆಗೆದುಕೊಂಡು ಹೋಗಿದ್ದಾನೆ. ಮನೆಯಿಂದ ಹೊರ ಹೋಗುವ ದೃಶ್ಯ ಅಪಾರ್ಟ್ಮೆಂಟ್ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮರಿಯಪ್ಪನಪಾಳ್ಯದ ಅಪಾರ್ಟ್ಮೆಂಟ್ನಿಂದ ಹೋಗಿದ್ದಾನೆ. ನಿನ್ನೆ ಸಂಜೆಯಿಂದ ಪೋಷಕರು ಮಗನನ್ನು ಹುಡುಕುತ್ತಿದ್ದಾರೆ. ಸಂಪರ್ಕಕ್ಕೆ ಸಿಗದಿದ್ದಕ್ಕೆ ಪೋಷಕರಿಗೆ ಆತಂಕ ಮೂಡಿದೆ.