Webdunia - Bharat's app for daily news and videos

Install App

ಪಟಾಕಿ ಸಿಡಿಸುವ ವೇಳೆ ಸ್ನೇಹಿತರ ಹುಚ್ಚಾಟಕ್ಕೆ ಯುವಕ ಬಲಿ

Sampriya
ಸೋಮವಾರ, 4 ನವೆಂಬರ್ 2024 (16:43 IST)
Photo Courtesy X
ಬೆಂಗಳೂರು: ಪಟಾಕಿ ಸಿಡಿಸುವ  ವೇಳೆ ಸ್ನೇಹಿತರ ಹುಚ್ಚಾಟಕ್ಕೆ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೋಣನಕುಂಟೆಯಲ್ಲಿ ನಡೆದಿದೆ. ಪ್ರತೀ ವರ್ಷವೂ ದೀಪಾವಳಿ ಸಂದರ್ಭದಲ್ಲಿ ಯುವಕರು ಮಾಡುವ ಎಡವಟ್ಟಿಗೆ ಪ್ರಾಣ ಹಾಗೂ ದೇಹಕ್ಕೆ ತೊಂದರೆಯಾಗುವುದನ್ನು ಗಮನಿಸಬಹುದು. ಸಾಕಷ್ಟು ಪ್ರಕರಣಗಳಲ್ಲಿ ತನ್ನದಲ್ಲದ ತಪ್ಪಿಗೆ ತೊಂದರೆ ಸಿಲುಕಿ ಕಣ್ಣು ಕಳೆದುಕೊಂಡಿದ್ದಾರೆ. ಇದೀಗ ಇತಂಹ ಹುಚ್ಚಾಟಕ್ಕೆ ಯುವಕನೋರ್ವ ಜೀವವನ್ನೇ ಕಳೆದುಕೊಂಡಿದ್ದಾನೆ.

ಪಟಾಕಿ ಸಿಡಿಸುವ ವೇಳೆ ಸ್ನೇಹಿತರ ಹುಚ್ಚಾಟಕ್ಕೆ ಯುವಕನೋರ್ವ ಬಲಿಯಾದ ಘಟನೆ ಬೆಂಗಳೂರಿನ ಕೋಣನಕುಂಟೆಯಲ್ಲಿ ನಡೆದಿದೆ.

ಮಾಹಿತಿ ಪ್ರಕಾರ, ಅಕ್ಟೋಬರ್ 31ರಂದು ಕೋಣನಕುಂಟೆ ಠಾಣೆ ವ್ಯಾಪ್ತಿಯ ವೀವರ್ಸ್ ಕಾಲೋನಿಯಲ್ಲಿ ಪಟಾಕಿ ಸ್ಫೋಟದಿಂದ ತೀವ್ರವಾಗಿ ಗಾಯಗೊಂಡಿದ್ದ ಶಬರೀಶ್ ಎಂಬ ಯುವಕ ಕೊನೆಯುಸಿರೆಳೆದಿದ್ದ.

ಅಕ್ಟೋಬರ್ 31ರಂದು ರಾತ್ರಿ ಮದ್ಯದ ನಶೆಯಲ್ಲಿ ಯುವಕರ ಗುಂಪೊಂದು ಪಟಾಕಿ ಸಿಡಿಸುತ್ತಿದ್ದರು. ಈ ವೇಳೆ ಶಬರೀಶ್‌ಗೆ ಪಟಾಕಿ ಹಚ್ಚುವಾಗ ಅದರ ಮೇಲೆ ಡಬ್ಬ ಇರಿಸಿ, ಆ ಡಬ್ಬದ ಮೇಲೆ ಕುಳಿತುಕೊಳ್ಳುವಂತೆ ಸವಾಲು ಹಾಕಿದ್ದಾರೆ.

ಅಮಲಿನಲ್ಲಿದ್ದ ಶಬರೀಶ್, ತಾನು ಪಟಾಕಿ ಸಿಡಿಯುವವರೆಗೂ ಡಬ್ಬದ ಮೇಲೆ ಕುಳಿತುಕೊಂಡರೆ, ತನಗೆ ಆಟೋ ರಿಕ್ಷಾ ಕೊಡಿಸಬೇಕು ಎಂದಿದ್ದ. ಅದಕ್ಕೆ ಸ್ನೇಹಿತರು ಒಪ್ಪಿಕೊಂಡಾಗ ಸವಾಲನ್ನು ಸ್ವೀಕರಿಸಿ ಪಟಾಕಿ ಇದ್ದ ಡಬ್ಬದ ಮೇಲೆ ಕುಳಿತಿದ್ದಾನೆ.

ಅದರಂತೆ ಭಾರೀ ಪಟಾಕಿಯನ್ನು ಡಬ್ಬದ ಕೆಳಗೆ ಇರಿಸಿ, ಅದಕ್ಕೆ ಬೆಂಕಿ ಹಚ್ಚಿ, ಡಬ್ಬದ ಮೇಲೆ ಶಬರೀಶ್‌ನನ್ನು ಕೂರಿಸಿದ್ದಾರೆ. ನಂತರ ಅಲ್ಲಿಂದ್ದ ಅವರು ಓಡಿದ್ದಾರೆ. ಪಟಾಕಿ ಸಿಡಿದ ರಭಸಕ್ಕೆ ಶಬರೀಶ್‌ನ ಖಾಸಗಿ ಅಂಗಕ್ಕೆ ತೀವ್ರವಾಗಿ ಸುಟ್ಟ ಗಾಯವಾಗಿತ್ತು. ತಕ್ಷಣ ಶಬರೀಶನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು‌ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 2ರಂದು ಆತ ಮೃತಪಟ್ಟಿದ್ದಾನೆ.

ಈ ಸಂಬಂಧ ಕೋಣನಕುಂಟೆ ಪೊಲೀಸರು ಆರೋಪಿಗಳಾದ ನವೀನ್, ದಿನಕರ್, ಸತ್ಯವೇಲು, ಕಾರ್ತಿಕ್, ಸತೀಶ್, ಸಂತೋಷ್ ಎಂಬುವರನ್ನು ಬಂಧಿಸಿದ್ದಾರೆ. ಸ್ನೇಹಿತರು ಪಟಾಕಿ ಸಿಡಿಸುವ ಕಿಡಿಗೇಡಿ ಕೃತ್ಯ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments