Publish Date: Sat, 16 Jul 2022 (10:28 IST)
Updated Date: Sat, 16 Jul 2022 (09:45 IST)
ಚಿಕ್ಕಬಳ್ಳಾಪುರ : ವಿವಾಹಿತೆಯ ಹಿಂದೆ ಬಿದ್ದ ಮತ್ತೊಬ್ಬ ವಿವಾಹಿತ, ತನ್ನನ್ನು ಪ್ರೀತಿಸುವಂತೆ ವಿವಾಹಿತೆಗೆ ದುಂಬಾಲು ಬಿದ್ದಿದ್ದ.
ಇದರಿಂದ ಮನನೊಂದ ಗೃಹಿಣಿ ಚಿಕ್ಕಬಳ್ಳಾಪುರ ಜಿಲ್ಲೆಯ ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಯುವಕನೊಬ್ಬ ವಿವಾಹಿತೆಯನ್ನು ಪ್ರೀತಿಸುತ್ತಿರುವುದನ್ನು ಅರಿತ ಆಕೆಯ ಮನೆಯವರು, ಆತನಿಗೆ ಬುದ್ಧಿ ಹೇಳಿದ್ರು. ಇದರಿಂದಲೂ ಸುಮ್ಮನಾಗದ ಆತ ವಿವಾಹಿತೆಗೆ ಬ್ಲಾಕ್ ಮೇಲ್ ಮಾಡಲು ಆಕೆಯ ಫೋಟೋ ಜೊತೆ ತನ್ನ ಫೋಟೋ ಸೇರಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ.
ಇದ್ರಿಂದ ಮಹಿಳೆ ಮನನೊಂದು ನೇಣಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಚೌಡರೆಡ್ಡಿಪಾಳ್ಯದಲ್ಲಿ ನಡೆದಿದೆ.
ಆಲ್ಫೀಯಾ ತಾಜ್ ಮೃತ ವಿವಾಹಿತೆ. ಈಕೆಗೆ ಇನ್ನೂ ಹದಿನೇಳು ವರ್ಷ ವಯಸ್ಸು. ಅಲ್ಪೀಯಾ ತಾಜ್ಗೆ ಹೈಸ್ಕೂಲ್ನಲ್ಲಿ ಓದುತ್ತಿದ್ದಾಗಲೇ ಆಕೆಯ ಪೋಷಕರು ಬಲವಂತವಾಗಿ ಮದುವೆ ಮಾಡಿ ಕೈ ತೊಳೆದುಕೊಂಡಿದ್ರು. ಆದ್ರೆ ಗಂಡನ ಮನೆಯಲ್ಲಿ ಇರಲಾಗದ ಆಲ್ಫೀಯಾ ತಾಜ್ ವಾಪಸ್ ಆಗಮಿಸಿ ತವರು ಮನೆಯಲ್ಲಿ ಇದ್ದಳು.
ಚೌಡರೆಡ್ಡಿ ಪಾಳ್ಯಾ ನಿವಾಸಿ ಹಾಗೂ ಪರಿಚಯಸ್ಥ ಯುವಕ ಸಯ್ಯದ್ ನಾಸೀರ್ ಆಲ್ಫೀಯಾ ಮೇಲೆ ಕಣ್ಣು ಹಾಕಿದ್ದ. ಆಲ್ಫೀಯಾಳನ್ನು ಪ್ರೀತಿಸುವುದಾಗಿ ಹೇಳಿ ಆಕೆಯ ಹಿಂದೆ ಬಿದ್ದಿದ್ದ. ಇದ್ರಿಂದ ಆಲ್ಫೀಯಾ ಸಹೋದರರು ಸಯ್ಯದ್ ನಾಸೀರ್ಗೆ ಬೈಯ್ದು ಬುದ್ಧಿ ಹೇಳಿ ಎಚ್ಚರಿಕೆ ನೀಡಿದ್ರು.
ಆದ್ರು ಸುಮ್ಮನಾಗದ ನಾಸೀರ್, ಆಲ್ಫೀಯಾಳ ಫೋಟೋ ಜೊತೆ ತನ್ನ ಫೋಟೋ ಜೋಡಿಸಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾನೆ. ಇದ್ರಿಂದ ನೊಂದು ಆಲ್ಫೀಯಾ ತಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆ ಸಹೋದರ ಆರೋಪಿಸಿದ್ದಾನೆ.