Select Your Language

Notifications

webdunia
webdunia
webdunia
webdunia

ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ, ತಬ್ಬಿಬ್ಬಾದ ಆಸ್ಪತ್ರೆ ಸಿಬ್ಬಂದಿ

Belgavi Hospital

sampriya

ಬೆಳಗಾವಿ , ಮಂಗಳವಾರ, 28 ಮೇ 2024 (17:31 IST)
Photo By X
ಬೆಳಗಾವಿ: ಹಾವಿನಿಂದ ಕಡಿತಕ್ಕೊಳಗಾದ ಯುವಕನೊಬ್ಬ ತನಗೆ ಕಚ್ಚಿದ ಹಾವಿನೊಂದಿಗೆ ಚಿಕಿತ್ಸೆಪಡೆಯಲು ಆಸ್ಪತ್ರೆಗೆ ಬಂದ ಘಟನೆ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.

ಬೆಳಗಾವಿ ತಾಲೂಕಿನ ಹುಂಚ್ಯಾನಹಟ್ಟಿ ಗ್ರಾಮದ ಯುವಕ ಶಾಹಿದ್ (21) ಮನೆ ಬಳಿ ಹಾವು ಬಂದಿದೆ.

ಶಾಹಿದ ಹಾವು ಹಿಡಿದಿದ್ದಾನೆ. ಬಳಿಕ ಬೆಟ್ಟದ ಮೇಲೆ ಹಾವು ಬಿಡುವ ಸಂದರ್ಭದಲ್ಲಿ ಶಾಹಿದ್​ಗೆ ಹಾವು ಕಚ್ಚಿದೆ. ಕೂಡಲೇ ಸ್ನೇಹಿತರೊಂದಿಗೆ ಕಚ್ಚಿದ ಹಾವನ್ನು ಡಬ್ಬದಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಬಂದಿದ್ದಾನೆ.


ಯಾವ ಹಾವು ಕಚ್ಚಿದೆ ಅಂತ ಗೊತ್ತಾದರೆ, ಸುಲಭವಾಗಿ ಚಿಕಿತ್ಸೆ ನೀಡಬಹುದು ಎಂದು ಶಾಹಿದ್​ ಆಸ್ಪತ್ರೆಗ ಹಾವು ತಂದಿದ್ದಾನೆ. ಡಬ್ಬದಲ್ಲಿ ಇರುವ ಜೀವಂತ ಹಾವು ನೋಡಿ ಆಸ್ಪತ್ರೆ ಸಿಬ್ಬಂದಿ, ರೋಗಿಗಳು ತಬ್ಬಿಬ್ಬಾಗಿದ್ದಾರೆ.
ಇನ್ನೂ ಚಿಕಿತ್ಸೆ ಪಡೆದ ಬಳಿಕ ಸ್ನೇಹಿತರ ಜೊತೆ ಬೈಕ್​ನಲ್ಲಿ ಹಾವು ಸಮೇತ ವಾಪಾಸ್ ಹೋಗಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ವೆಸ್ಟ್‌ಇಂಡೀಸ್‌ ಕ್ರಿಕೆಟಿಗ ರಸೆಲ್ ಜತೆ ಡಾನ್ಸ್‌ ಮಾಡಿದ ಅನನ್ಯಾ ಪಾಂಡೆ