ವಿಜಯಪುರ: ವಿಜಯಪುರ ಜಿಲ್ಲೆಯ 18 ವರ್ಷದ ಯುವತಿಯೊಬ್ಬರು ದೇಶದ ಅತ್ಯಂತ ಕಿರಿಯ ಪೈಲಟ್ ಆಗಿ ಇತಿಹಾಸ ನಿರ್ಮಿಸಿದ್ದಾರೆ.
18 ವರ್ಷದ ಸಮೈರಾ ಹುಲ್ಲೂರು ಅವರು ಕಮರ್ಶಿಯಲ್ ಪೈಲಟ್ ಲೈಸನ್ಸ್ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಈ ಸಾಧನೆಯಿಂದ ಕುಟುಂಬದಲ್ಲಿ ಸಂತೋಷ ಮನೆ ಮಾಡಿದೆ.
ವಿಜಯಪುರದಲ್ಲಿ ತಮ್ಮ ಶಿಕ್ಷಣವನ್ನು ಮುಗಿಸಿ, 6 ತಿಂಗಳ ಕಾಲ ದೆಹಲಿಯಲ್ಲಿ ಪೈಲಟ್ ತರಬೇತಿ ಮುಗಿಸಿ 18ನೇ ವಯಸ್ಸಿಗೆ ಪೈಲಟ್ ಆಗಿ ಹೊರಹೊಮ್ಮಿದ್ದಾರೆ. 25ನೇ ವಯಸ್ಸಿಗೆ ಪೈಲಟ್ ಆಗಿರುವ ಕ್ಯಾಪ್ಟನ್ ತಪೇಶ್ ಕುಮಾರ್ ಅವರ ಈ ಸಾಧನೆಗೆ ಪ್ರೇರಣೆ.
ಸಮೈರಾಳ ಸಾಧನೆಗೆ ಜಿಲ್ಲೆ, ರಾಜ್ಯ ಹಾಗೂ ದೇಶದ ಹಲವೆಡೆಯಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ಹೆಣ್ಣು ಮಕ್ಕಳನ್ನು ಕಡೆಗಣೆಸುವ ಜನರಿಗೆ ಸಮೈರಾ ಕುಟುಂಬ ಮಾದರಿ ಆಗಿದೆ.<>