Select Your Language

Notifications

webdunia
webdunia
webdunia
webdunia

ಅಲೆಯ ಅಬ್ಬರ: ಸಮುದ್ರ ಸೇರಿದ ಯುವತಿಯರು

ಅಲೆಯ ಅಬ್ಬರ: ಸಮುದ್ರ ಸೇರಿದ ಯುವತಿಯರು
bangalore , ಬುಧವಾರ, 13 ಜುಲೈ 2022 (21:59 IST)
ಕೆಲವೊಮ್ಮೆ ಮೋಜು ಮಸ್ತಿಯೇ ಬದುಕಿಗೆ ಮುಳುವಾಗುವುದಿದೆ. ಇದಕ್ಕೆ ಬೇಕಾದಷ್ಟು ಸಾಕ್ಷಿಗಳು ಕಾಣಸಿಗುತ್ತವೆ. ಸದ್ಯ ಇಂತಹದ್ದೇ ದೃಶ್ಯವೊಂದು ವೈರಲ್ ಆಗುತ್ತಿದೆ. ಯುವತಿಯರು ಅಬ್ಬರಿಸುವ ಅಲೆಗಳ ಎದುರು ನಿಲ್ಲಲು ಹೋಗಿ ಸಂಕಷ್ಟ ಎದುರಿಸಿದ ದೃಶ್ಯ ಈಗ ಎಲ್ಲರಲ್ಲೂ ಆಘಾತ ಮೂಡಿಸಿದೆ. ಈ ದೃಶ್ಯವನ್ನು ಕಂಡಾಗ ಎದೆ ನಡುಗಿದಂತಾಗುತ್ತದೆ. ಅಬ್ಬರಿಸುವ ಅಲೆಯ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಈ ಸಮುದ್ರದ ದಡದ ಬಂಡೆಯ ಮೇಲೆ ಯುವತಿಯರು ನಿಂತಿರುವುದು ಕೂಡಾ ಕಾಣಿಸುತ್ತದೆ. ಅಲೆ ಅಬ್ಬರಿಸುತ್ತಿದ್ದರೂ ಈ ಯುವತಿಯರು ಅಂಜಿಕೆ ಇಲ್ಲದೆ ನಿಂತಿದ್ದರು. ಆದರೆ, ಇದಾದ ಅರೆಕ್ಷಣದಲ್ಲಿ ಈ ಯುವತಿಯರೇ ಬೆಚ್ಚಿಬೀಳುವ ಸನ್ನಿವೇಶವೊಂದು ಎದುರಾಗಿತ್ತು. ಅದೇನೆಂದರೆ, ಅಬ್ಬರಿಸಿದ ಅಲೆ ಈ ಯುವತಿಯರನ್ನು ಬೀಳಿಸುವ ಜತೆಗೆ ಇಬ್ಬರನ್ನು ನೀರಿಗೆ ಎಳೆದೊಯ್ದಿದೆ. ಈ ದೃಶ್ಯವನ್ನು ನೋಡುವಾಗಲೇ ಎದೆ ಧಗ್ ಎಂದಂತಾಗುತ್ತದೆ. ``ನಿಮ್ಮ `ಲೈಫ್' ನಿಮ್ಮ`ಲೈಕ್‌'ಗಳಿಗಿಂತ ಬಹಳ ಮುಖ್ಯ' ಎಂಬ ಕ್ಯಾಪ್ಶನ್‌ನೊಂದಿಗೆ ದೀಪಾನ್ಶು ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಾಯು ವಿಹಾರಿಗಳಿಗೆ ಶೀಘ್ರವೆ ಗುಡ್ ನ್ಯೂಸ್