Select Your Language

Notifications

webdunia
webdunia
webdunia
webdunia

ಮಂಗಳೂರಿನ ಪಂಪ್ ವೆಲ್ ಫೈಓವರ್ ನಲ್ಲಿ ಭೀಕರ ಅಪಘಾತ; ಓರ್ವ ವ್ಯಕ್ತಿ ಸಾವು

ಮಂಗಳೂರಿನ ಪಂಪ್ ವೆಲ್ ಫೈಓವರ್ ನಲ್ಲಿ ಭೀಕರ ಅಪಘಾತ; ಓರ್ವ ವ್ಯಕ್ತಿ ಸಾವು
ಮಂಗಳೂರು , ಭಾನುವಾರ, 9 ಫೆಬ್ರವರಿ 2020 (08:23 IST)
ಮಂಗಳೂರು : ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಮಂಗಳೂರಿನ ಪಂಪ್ ವೆಲ್ ಫೈಓವರ್ ನಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರೊಂದು ಕೆಳಗೆ ಬಿದ್ದ ಪರಿಣಾಮ  ಅಪಘಾತ ಸಂಭವಿಸಿದ್ದು, ಓರ್ವ ವ್ಯಕ್ತಿ ಸಾವನಪ್ಪಿದ್ದಾನೆ.

ಸ್ವಾಗತ್ ಗ್ಯಾರೇಜ್ ನ ಮುಖ್ಯಸ್ಥ  ಪ್ರವೀಣ್ ಫರ್ನಾಂಡಿಸ್ (46) ಮೃತಪಟ್ಟ ವ್ಯಕ್ತಿ. ಕಾರನ್ನು ರಿಪೇರಿ ಮಾಡಿಸಿ ಟೆಸ್ಟ್ ಡ್ರೈವ್ ಮಾಡುವ ವೇಳೆ ಉಡುಪಿಯಿಂದ ಕಾಸರಗೋಡು ಕಡೆಗೆ  ಹೋಗುತ್ತಿದ್ದ ಇನ್ನೊಂದು ಕಾರು ವೇಗವಾಗಿ ಚಲಿಸಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಫೈಓವರ್ ನಿಂದ ಕೆಳಗೆ ಬಿದ್ದು ಪ್ರವೀಣ್ ಕಾರಿಗೆ ಡಿಕ್ಕಿ ಹೊಡೆದಿದೆ.
 

ಈ ಘಟನೆಯಲ್ಲಿ ಪ್ರವೀಣ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡ ಮತ್ತಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿ ಚುನಾವಣೆಯ ಎಲ್ಲಾ ಸಮೀಕ್ಷೆಗಳೂ ಸುಳ್ಳಾಗಲಿದ್ದು, ಬಿಜೆಪಿ 48 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ- ಬಿಜೆಪಿ ಸಂಸದ