Webdunia - Bharat's app for daily news and videos

Install App

ಜೈಲಿನಿಂದ ಬೆದರಿಕೆ ಕರೆ; ಇಬ್ಬರ ಬಂಧನ

Webdunia
ಶುಕ್ರವಾರ, 2 ಡಿಸೆಂಬರ್ 2022 (20:12 IST)
VHP ಮುಖಂಡನಿಗೆ ಜೈಲಿನಿಂದಲೇ ಕಿಡಿಗೇಡಿಗಳಿಂದ ಬೆದರಿಕೆ ಕರೆ ಬಂದಿದ್ದು, ಬೆದರಿಕೆ ಹಾಕಿದವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಟಿಪ್ಪು ನಗರದ ಅಲ್ತಾಫ್ ಅಲಿಯಾಸ್ ಕಟ್ಟಪ್ಪ ಎಂಬಾತನನ್ನು ಬಂಧಿಸಲಾಗಿದೆ. ನವೆಂಬರ್​​​​ 25 ರಂದು ಬೆಳಿಗ್ಗೆ 11 ಗಂಟೆಯಿಂದ 26 ರ ಸಂಜೆ 7 ಗಂಟೆಯವರಿಗೆ ಜಿತೇಂದ್ರ ಎಂಬುವವರಿಗೆ ವಾಟ್ಸಾಪ್​ ಕರೆ ಬಂದಿದೆ. ಹಣ ನೀಡು ಇಲ್ಲದಿದ್ದರೆ ನಿನ್ನನ್ನು ಹತ್ಯೆ ಮಾಡಲಾಗುವುದು ಎಂದು ಹೆದರಿಸಲಾಗಿತ್ತಂತೆ. ಗುಲ್ಬರ್ಗ ಮತ್ತು ಬೆಳಗಾವಿ ಹಿಂಡಲಗಾ ಜೈಲಿನಿಂದ  ಕರೆ ಬಂದಿದ್ದು, ಭದ್ರಾವತಿ ನಾಗ ಎಂಬಾತ ಮೊದಲು 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ನಂತರ 25 ಸಾವಿರ ರೂಪಾಯಿಗೆ ಒಪ್ಪಿಕೊಂಡಿದ್ದಾನೆ. ಫೋನ್ ಪೇ, ಗೂಗಲ್ ಪೇ ಮೂಲಕ ಹಣ ನೀಡುವಂತೆ ಒತ್ತಾಯ ಮಾಡಲಾಗಿದ್ದು, ಆಗ ಜಿತೇಂದ್ರ ಖುದ್ದು ಹಣ ನೀಡುವುದಾಗಿ ಹೇಳಿದ್ದಾನೆ. ನಿಮ್ಮವರನ್ನು ಕಳಿಸಿ, ಗೋಪಾಳದ ಕೆನರಾ ಬ್ಯಾಂಕ್ ಬಳಿ ಇರುತ್ತೇನೆ ಎಂದು ಜಿತೇಂದ್ರ ಹೇಳಿದ್ದಾನೆ. ಅದರಂತೆ ಕರೆ ಮಾಡಿದ್ದ ವ್ಯಕ್ತಿ ಆತನ ಸಹಚರ ಅಲ್ತಾಫ್​​​ನನ್ನು ಕಳುಹಿಸಿದ್ದ. ಆಗ ತುಂಗಾನಗರ ಠಾಣೆ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಜೈಲಿನಿಂದ ಕರೆ ಮಾಡಿದ್ದು ಯಾರು, ಬಂಧನವಾದ ವ್ಯಕ್ತಿಗಳು ಯಾರು ಎಂದು ತನಿಖೆಯಿಂದ ತಿಳಿದು ಬರಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಾರ್ವಜನಿಕರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ನೀಡಲು ಸರ್ಕಾರದಿಂದ ಪ್ರಜಾಸೇವಾ ಅಭಿಯಾನ: ಕಾರ್ಯನಿರ್ವಹಣೆ ಹೇಗೆ ಗಮನಿಸಿ

H-1B ಕಟ್ಟುಪಾಡು: ಭಾರತೀಯ ಐಟಿ ಮಂದಿಗೆ ಸವಾಲೋ, ಗ್ಲೋಬಲ್ ಆಫರ್ ಪಡೆಯುವ ಬಂಗಾರದ ಅವಕಾಶವೋ

ಉತ್ತರ ಪ್ರದೇಶದಲ್ಲಿ ಖಾಸಗಿ ಬಸ್ ಏರಿದ ಯುವತಿಗೆ ಇದೆಂಥಾ ಶಾಕ್: ಬಸ್ ನಲ್ಲೇ ನಡೆಯಿತು ರೇಪ್ Video

ಸಚಿವರೆಂದರೆ ಹೀಗಿರಬೇಕು…ಬೆಳ್ಳಂ ಬೆಳಿಗ್ಗೆ ಕಸದ ಗಾಡಿ ಪಕ್ಕ ಕೃಷ್ಣ ಭೈರೇಗೌಡ ನೋಡಿ ಜನರಿಗೆ ಶಾಕ್: Video

ಉತ್ತರ ಪ್ರದೇಶದಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದಾಗ ಮರ ಉರುಳಿ ವಿದ್ಯುತ್ ತಂತಿ ಸ್ಪರ್ಶಿಸಿದ ವ್ಯಕ್ತಿ: ಬದುಕುಳಿದಿದ್ದಕ್ಕೆ ಇವರೇ ಕಾರಣ video

ಮುಂದಿನ ಸುದ್ದಿ
Show comments