ಸಿಎಂ ಬದಲಾವಣೆ ಬಗ್ಗೆ ಬಹಿರಂಗ ಹೇಳಿಕೆ ವಿಚಾರವಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.ಬಹಿರಂಗ ಹೇಳಿಕೆ ನೀಡುವವರ ಭವಿಷ್ಯ ಹಾಳು ಮಾಡಿಕೊಳ್ಳೋದುಬೇಡ.ಪಕ್ಷದ ಭವಿಷ್ಯ ಕೂಡ ಹಾಳು ಮಾಡೋದು ಬೇಡ.ಲೋಕಾ ಸಭಾ ಚುನಾವಣೆಗೆ ವರದಿ ಕೊಡಲು ಹೇಳಿದ್ವಿ.ಅದರಲ್ಲಿ ಕೆಲವರು ಕೊಟ್ಟಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ನಾವು ಜಿಲ್ಲಾವರು ಪ್ಯಾನಲ್ ಮಾಡಲು ಸಚಿವರಿಗೆ ಹೇಳಿದ್ವಿ.ಇನ್ನೂ ಕೆಲವರು ವರದಿ ನಮಗೆ ಕೊಟ್ಟಿಲ್ಲ.ಅವರು ಕೊಟ್ಟ ಬಳಿಕ ನಾವು ಸರ್ವೆ ಮಾಡಿಸಬೇಕು.ಮತದಾರರ ಮಿಡಿತ ಪರೀಕ್ಷೆ ಮಾಡಿಸಬೇಕು.ಅದಕ್ಕೆ ಸಚಿವರಿಗೆ ಸೂಚನೆ ನೀಡಿದ್ದೇವೆ.ಯಾರು ಕೂಡ ಮಾತನಾಡಬೇಡಿ ಅಂತ ಹೇಳಿದ್ದೇವೆ.ನಾನು ಮತ್ತು ಸಿಎಂ ಸೇರಿದಂತೆ ಯಾರು ಮಾತನಾಡಬಾರದು.ಐದು ವರ್ಷದ ನಮಗೆ ಆಡಳಿತ ಮಾಡಲು ಅವಕಾಶ ನೀಡಿದ್ದಾರೆ.ಗ್ಯಾರಂಟಿಗಳ ಇಂಪ್ಲೀಮೆಂಟ್ ಮಾಡಿದ್ದೇವೆ.
ಅವುಗಳ ಗಮನ ಹರಿಸಲು ಹೇಳಿದ್ದೇವೆ.ಸಚಿವರಿಗೆ ಟಾಸ್ಕ್ ಕೊಟ್ಟಿದ್ದೇವೆ.ಲೋಕಸಭಾ ಉಸ್ತುವಾರಿ ಬೇರೆ ಕಡೆ ಕೊಟ್ಟಿದ್ದೇವೆ.ಅವರ ಜಿಲ್ಲೆ ಬಿಟ್ಟು ಬೇರೆ ಉಸ್ತುವಾರಿ ನೀಡಿದ್ದೇವೆ.ಈ ವಾರದಲ್ಲಿ ವರದಿ ಕೊಡಲು ಹೇಳಿದ್ದೇವೆ ಬಳಿಕ ಸರ್ವೆ ಮಾಡಿಸುತ್ತೇವೆ.ಜನವರಿಯಲ್ಲಿ ಮೊದಲ ಪಟ್ಟಿ ಬಿಡುಗಡೆ ಮಾಡುತ್ತೇವೆ.ಅಭ್ಯರ್ಥಿಗಳಿಗೆ ಕೆಲಸ ಮಾಡಲು ಸೂಚನೆ ನೀಡಲಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.