Select Your Language

Notifications

webdunia
webdunia
webdunia
webdunia

ನಾಳೆ ಹೊಸಹಳ್ಳಿ ಕಬ್ಬನ್ ಪಾರ್ಕ್‌ ಮೆಟ್ರೋ ಸ್ಥಗಿತದಲ್ಲಿ ಮಹತ್ವದ ಬದಲಾವಣೆ

Hosahalli To Cubbon Park
Photo Credit X
ಬೆಂಗಳೂರು: ಭಾನುವಾರ ನಗರದಲ್ಲಿ ಅನೇಕ ಕಾರ್ಯಕ್ರಮಗಳಿರುವ ಕಾರಣ ನಮ್ಮ ಮೆಟ್ರೊ ನೇರಳೆ ಮಾರ್ಗದಲ್ಲಿ ಬೆಳಿಗ್ಗೆ 7ರಿಂದ ಎರಡು ಗಂಟೆ ಭಾಗಶಃ ಸಂಚಾರ ಸ್ಥಗಿತಗೊಳಿಸುವ ಸುತ್ತೋಲೆಯನ್ನು ಬಿಎಂಆರ್‌ಸಿಎಲ್‌ ವಾಪಸ್‌ ಪಡೆದಿದೆ.ಈ ಮೂಲಕ ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿದೆ. 

ಸುತ್ತೋಲೆಯಲ್ಲಿ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮತ್ತು ಸೆಂಟ್ರಲ್‌ ಕಾಲೇಜಿನ ಸರ್‌ ಎಂ. ವಿಶ್ವೇಶ್ವರಯ್ಯ ಮೆಟ್ರೊ ನಿಲ್ದಾಣಗಳ ನಡುವೆ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಭಾನುವಾರ ಬೆಳಿಗ್ಗೆ 7ರಿಂದ 9ರವರೆಗೆ ಹೊಸಹಳ್ಳಿ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ ಮತ್ತು ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣಗಳ ನಡುವೆ ಮೆಟ್ರೊ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿತ್ತು. 

ಸುತ್ತೋಲೆ ಹಿಂದಕ್ಕೆ ಪಡೆದಿರುವುದಲ್ಲದೇ, ಸಂಚಾರದ ಆರಂಭದ ಸಮಯವನ್ನು ಬದಲು ಮಾಡಿದೆ. 

ಅದರಂತೆ ಭಾನುವಾರ ಬೆಳಿಗ್ಗೆ 7ಕ್ಕೆ ಮೆಟ್ರೊ ಸಂಚಾರ ಆರಂಭವಾಗುವ ಬದಲು ಭಾನುವಾರ ಬೆಳಿಗ್ಗೆ 5ಕ್ಕೆ ಸಂಚಾರ ಆರಂಭಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೀದರ್‌: ತೊಟ್ಟಿನಲ್ಲಿದ್ದ ಮಗುವಿನ ಮೇಲೆ ಬೀದಿ ನಾಯಿ ದಾಳಿ, ಸಾವು