Select Your Language

Notifications

webdunia
webdunia
webdunia
webdunia

ಬೀದರ್‌: ತೊಟ್ಟಿನಲ್ಲಿದ್ದ ಮಗುವಿನ ಮೇಲೆ ಬೀದಿ ನಾಯಿ ದಾಳಿ, ಸಾವು

Stray Dog
ಬೀದರ್: ಬೀದಿ ನಾಯಿ ದಾಳಿಗೆ 4 ತಿಂಗಳ ಮಗುವೊಂದು ಸಾವನ್ನಪ್ಪಿರುವ ಧಾರುಣ ಘಟನೆ  ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ದಬಲಗುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಪೊಲೀಸರ ಪ್ರಕಾರ, ಮಗುವನ್ನು ಮನೆಯೊಳಗೆ ಮಲಗಿಸಿದ್ದರು, ಪೋಷಕರು ಹೊರಗೆ ಹೋಗಿದ್ದ ವೇಳೆ ನಾಯಿ ಮನೆಯೊಳಗೆ ದಾಳಿ ನಡೆದಿದೆ. 

ಈ ವೇಳೆ ಬೀದಿನಾಯಿಯೊಂದು ಮನೆಯೊಳಗೆ ನುಗ್ಗಿ ತೊಟ್ಟಿಲಲ್ಲಿ ಮಲಗಿದ್ದ ಮಗುವಿನ ಮೇಲೆ ದಾಳಿ ಮಾಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾಯಿಯು ಮಗುವಿನ ದೇಹದ ವಿವಿಧ ಭಾಗಗಳಿಗೆ ಕಚ್ಚಿ ತೀವ್ರವಾಗಿ ಗಾಯಗೊಳಿಸಿದೆ. ಮಗುವಿನ ಅಳಲು ಕೇಳಿದ ಪೋಷಕರು ಗಾಬರಿಯಿಂದ ಮನೆಗೆ ಧಾವಿಸಿದರು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗುವನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ವೈದ್ಯರು ಆಗಲೇ ಮಗು ಸತ್ತು ಹೋಗಿದೆ ಎಂದು ಘೋಷಣೆ ಮಾಡಿದ್ದಾರೆ. ಲಾಯಿತು, ಅಲ್ಲಿ ವೈದ್ಯರು ಮಗು ಸತ್ತಿದೆ ಎಂದು ಘೋಷಿಸಿದರು ಎಂದು ಅವರು ಹೇಳಿದರು.

ಈ ಪ್ರಕರಣದಲ್ಲಿ ಇನ್ನೂ ಪ್ರಕರಣ ದಾಖಲಾಗಿಲ್ಲ, ವೈದ್ಯಕೀಯ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡು ರಾಜಕೀಯದಲ್ಲಿ ಸುಗಮವಾದ ವಿಜಯ್ ಸಿಎಂ ಹಾದಿ, ಮಹತ್ವದ ಬೆಳವಣಿಗೆ